ಕೋಲಾರ : ಸಾಲಬಾಧೆ ತಾಳಲಾರದೇ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೋಲಾರ ತಾಲೂಕು ಚಿಟ್ನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನಾಗರಾಜ್ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗರಾಜ್ ಖಾಸಗಿ ಫೈನಾನ್ಸ್ , ಧರ್ಮಸ್ಥಳ ಸಂಘ, ವಿವಿಧೆಡೆ ಹತ್ತು ಲಕ್ಷಕ್ಕೂ ಹೆಚ್ಚಿನ ಸಾಲ ಮಾಡಿದ್ದರು. ಸಾಲದ ವಿಚಾರವಾಗಿ ಕುಟುಂಬದಲ್ಲಿ ಜಗಳವಾಗಿದ್ದು, ಭಾನುವಾರ ಬೆಳಗ್ಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮದುವೆಯಾಗಿ ಹದಿನಾರು ವರ್ಷವಾಗಿದ್ದು, ಒಂದು ಹೆಣ್ಣು ಹಾಗೂ ಗಂಡು ಮಗು ಇತ್ತು. ತರಕಾರಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ನಾಗರಾಜ್, ಕಳೆದ ಐದು ವರ್ಷದ ಹಿಂದೆ ಮನೆ ನಿರ್ಮಾಣಕ್ಕೆಂದು ಸಾಲ ಮಾಡಿದ್ದರು. ಕೆಲವು ದಿನಗಳಿಂದ ವ್ಯಾಪಾರದಲ್ಲೂ ನಷ್ಟವುಂಟಾಗಿತ್ತು. ಖಾಸಗಿ ಫೈನಾನ್ಸ್ ಗಳಿಂದ ಸಾಲದ ಹಣ ಕಟ್ಟುವಂತೆ ಫೋನ್ ಮಾಡಿದ್ದು, ಈ ಸಾಲದ ಹಣದ ವಿಚಾರವಾಗಿ ಮನೆಯಲ್ಲಿ ಗಲಾಟೆ ನಡೆದಿತ್ತು ಎಂದು ಅವರ ಪತ್ನಿ ನೇತ್ರಾವತಿ ಮಾಹಿತಿ ನೀಡಿದ್ದರು.