ಉಡುಪಿ: ಕಳೆದ 8 ವರ್ಷಗಳಿಂದ ಕಣ್ಮರೆಯಾಗಿದ್ದ ನಕ್ಸಲ್ ತೊಂಬಟ್ಟು ಲಕ್ಷ್ಮೀ ಇಂದು ಉಡುಪಿ ಜಿಲ್ಲಾಧಿಕಾರಿ ಎದುರು ಶರಣಾಗಿದ್ದಾರೆ. ಭಾನುವಾರ ಬೆಳಗ್ಗೆ 11ಕ್ಕೆ ನಕ್ಸಲ್ ತೊಂಬಟ್ಟು ಲಕ್ಷ್ಮೀ ಉಡುಪಿ ಜಿಲ್ಲಾಧಿಕಾರಿ ಎದುರು ಶರಣಾಗಿದ್ದಾರೆ. 2006 ರಿಂದ ತೊಂಬಟ್ಟು ಲಕ್ಷ್ಮೀ ಕಣ್ಮರೆಯಾಗಿದ್ದರು.
ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಸದಸ್ಯ ಶ್ರೀಪಾಲ್ ಜೊತೆ ನಕ್ಸಲ್ ಲಕ್ಷ್ಮಿ, ಎಸ್ಪಿ ಕಚೇರಿಗೆ ಆಗಮಿಸಿದ್ದು, ಅಲ್ಲಿ ಶರಣಾಗತಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. ಬಳಿಕ ಭದ್ರತೆಯೊಂದಿಗೆ ಡಿಸಿ ಕಚೇರಿಗೆ ಲಕ್ಷ್ಮಿಯನ್ನು ಪೊಲೀಸರು ಕರೆದೊಯ್ದರು. ಶರಣಾದ ನಕ್ಸಲ್ ಜೊತೆ ಆಕೆಯ ಸಹೋದರ ಮತ್ತು ಬಂಧುಗಳು ಹಾಜರಿದ್ದರು.
ಲಕ್ಷ್ಮೀ ಸಂಜೀವ ಎಂಬುವರನ್ನು ಮದುವೆಯಾಗಿದ್ದು, ಅವರ ಜೊತೆಗೆ ಆಂಧ್ರಪ್ರದೇಶದಲ್ಲಿ ವಾಸವಾಗಿದ್ದರು ಕರ್ನಾಟಕದಲ್ಲಿ ಲಕ್ಷ್ಮಿ ವಿರುದ್ಧ ಮೂರು ಪ್ರಕರಣ ದಾಖಲಾಗಿದ್ದು, ಮಾಸ್ಯೆಬೈಲು ಠಾಣೆಯಲ್ಲಿ 3 ಪ್ರಕರಣಗಳ ವಿಚಾರಣೆ ಬಾಕಿ ಇದೆ.