ಫಿಲಡೆಲ್ಫಿಯಾ: ಪೆನ್ಸಿಲ್ವೆನಿಯಾದ ಅತಿದೊಡ್ಡ ನಗರವಾದ ಫಿಲಡೆಲ್ಫಿಯಾದಲ್ಲಿ ಲಘು ವಿಮಾನ ಪತನಗೊಂಡಿದ್ದು ಕನಿಷ್ಠ 6 ಮಂದಿ ಸಾವಪ್ಪಿದ್ದಾರೆ ಎಂದು ವರದಿಯಾಗಿದೆ. ದುರಂತದಲ್ಲಿ ಸ್ಥಳೀಯರೂ ಸಾವನ್ನಪ್ಪಿದ್ದು ಹೆಚ್ಚಿನ ಸಾವುನೋವುಗಳಾಗಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅಪಘಾತಕ್ಕೀಡಾದ ವಿಮಾನದಲ್ಲಿ ಒಂದು ಮಗು ಸೇರಿದಂತೆ 6 ಜನರು ಪ್ರಯಾಣಿಸುತ್ತಿದ್ದರು. ಈ ಆರು ಜನರೂ ಮೆಕ್ಸಿಕನ್ ಮೂಲದವರು ಎಂದು ತಿಳಿದುಬಂದಿದೆ.
ಲಘು ವಿಮಾನವು ಈಶಾನ್ಯ ಫಿಲಡೆಲ್ಫಿಯಾ ವಿಮಾನ ನಿಲ್ದಾಣದಿಂದ ಮಿಸೌರಿಯ ಸ್ಪ್ರಿಂಗ್ಫೀಲ್ಡ್-ಬ್ರಾನ್ಸನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೊರಟಿತ್ತು. ಆದ್ರೆ ಈಶಾನ್ಯ ಫಿಲಡೆಲ್ಫಿಯಾ ವಿಮಾನ ನಿಲ್ದಾಣದಿಂದ 3 ಮೈಲಿ ದೂರದಲ್ಲಿ ವಿಮಾನ ಟೇಕಾಫ್ ಆದ ಕೇವಲ 30 ಸೆಕೆಂಡುಗಳಲ್ಲಿ ಪತಗೊಂಡಿದೆ. ಈ ವೇಳೆ ಬೆಂಕಿ ಉಂಡೆಗಳು ಚಿಮ್ಮಿದ್ದು ಹತ್ತಿರದ ಹಲವು ಮನೆಗಳಿಗೂ ಹಾನಿಯಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕಾ ಅಧ್ಯಕ್ಷ ಟ್ರಂಪ್, ʻಫಿಲಡೆಲ್ಫಿಯಾದಲ್ಲಿ ವಿಮಾನವು ಪತನಗೊಂಡಿರುವುದು ನೋಡಿ ತುಂಬಾ ದುಃಖವಾಗಿದೆ, ಮುಗ್ಧ ಜೀವಗಳು ಬಲಿಯಾಗಿವೆ ಎಂದಿದ್ದಾರೆ.
ಕಳೆದ ಮೂರು ದಿನಗಳ ಹಿಂದೆಯಷ್ಟೇ ವಾಷಿಂಗ್ಟನ್ ಡಿಸಿಯಲ್ಲಿ ಸೇನಾ ಹೆಲಿಕಾಪ್ಟರ್ – ಅಮೆರಿಕರ ವಿಮಾನದ ನಡುವಿನ ದುರಂತದಲ್ಲಿ 67 ಮಂದಿ ದುರ್ಮರಣಕ್ಕೀಡಾಗಿದ್ದು ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಭೀಕರ ಘಟನೆ ನಡೆದಿದೆ.