ಹಾಸನ : ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ತಗರೆ ಗ್ರಾಮದ ಗಜಪಡೆಯ ಹಿಂಡು ಪ್ರತ್ಯಕ್ಷವಾಗಿದೆ. ಸುಮಾರು ಇಪ್ಪತ್ತೈದು ಹೆಚ್ಚು ಕಾಡಾನೆಗಳು ರಸ್ತೆ ದಾಟಿದ್ದು, ಗಜಪಡೆ ರಸ್ತೆ ದಾಟುವ ಸವಾರರು ವೇಳೆ ವಾಹನಗಳನ್ನು ನಿಲ್ಲಿಸಿಕೊಂಡು ನಿಂತಿದ್ದರು. ಜೊತೆಗೆ ರಸ್ತೆಯಲ್ಲಿ ನಿಂತು ಕಾಡಾನೆಗಳು ಎಷ್ಟಿವೆ ಎಂದು ಲೆಕ್ಕ ಹಾಕಿದ ದೃಶ್ಯವೂ ಕಂಡು ಬಂದಿದೆ.
ಮರಿಗಳು, ಸಲಗಗಳೇ ಹೆಚ್ಚಾಗಿರುವ ಕಾಡಾನೆಗಳ ಹಿಂಡಿನ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕಾಡಾನೆಗಳು ಕಾಫಿ ತೋಟಕ್ಕೆ ನುಗ್ಗಿದ್ದು, ಕಾರ್ಮಿಕರು ಭಯದಿಂದ ಅಲ್ಲಿಂದ ವಾಪಸ್ ಬಂದಿದ್ದಾರೆ. ಬೇಲೂರು ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಕಾಡಾನೆಗಳ ಸಮಸ್ಯೆ ನಿವಾರಣೆ ಮಾಡುವಲ್ಲಿ ವಿಫಲವಾದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.