ಬೆಂಗಳೂರು:- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಬಿಗ್ ಶಾಕ್ ಕೊಟ್ಟಿದೆ.
ಬಿಬಿಎಂಪಿಯ ಎಲ್ಲಾ 8 ವಲಯಗಳಲ್ಲಿ 608 ಆಸ್ತಿಗಳಿಂದ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದವರ ಆಸ್ತಿಗಳ ಮಾರಾಟಕ್ಕೆ ಪಾಲಿಕೆ ಮುಂದಾಗಿದೆ.
ಈ ಬಗ್ಗೆ ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಮಾಹಿತಿ ನೀಡಿದ್ದಾರೆ. ಆಸ್ತಿ ತೆರಿಗೆ ಸಂಗ್ರಹಿಸುವ ವಿಚಾರವಾಗಿ ಕಾರಣ ಕೇಳಿ ನೋಟಿಸ್, ಬೇಡಿಕೆ ನೋಟಿಸ್, ಆಸ್ತಿಗಳ ಮುಟ್ಟೊಗೋಲು, ವಸತಿಯೇತರ ಆಸ್ತಿಗಳಿಗೆ ಬೀಗಮುದ್ರೆ ಸೇರಿದಂತೆ ಇನ್ನಿತರೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಸಹ ಸಾಕಷ್ಟು ಆಸ್ತಿ ಮಾಲೀಕರು ದೀರ್ಘಕಾಲದಿಂದ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸುತ್ತಿಲ್ಲ. ಈ ಸಂಬಂಧ ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡುವ ಸಲುವಾಗಿ ಆಸ್ತಿ ತೆರಿಗೆ ಪಾವತಿಸದ ಭಾರೀ ಬಾಕಿ ಉಳಿಸಿಕೊಂಡ ಆಸ್ತಿದಾರರ ಸ್ಥಿರ ಆಸ್ತಿಗಳನ್ನು ತುರ್ತು ಮಾರಾಟ ಮಾಡಲು ಹರಾಜು ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ ಎಂದು ಬಿಬಿಎಂಪಿಯು ಹೇಳಿದೆ.
ಪೂರ್ವ ವಲಯ
ಪಶ್ಚಿಮ ವಲಯ
ದಕ್ಷಿಣ ವಲಯ
ಮಹದೇವಪುರ ವಲಯ
ಬೊಮ್ಮನಹಳ್ಳಿ ವಲಯ
ಯಲಹಂಕ ವಲಯ
ಆರ್.ಆರ್ ನಗರ ವಲಯ
ದಾಸರಹಳ್ಳಿ ವಲಯ
ಕಂಗಾಲಾದ ಆಸ್ತಿದಾರರು
ಪೂರ್ವ ವಲಯ: ಪೂರ್ವ ವಲಯದಲ್ಲಿ ಬರುವ ಜೆ.ಸಿ ನಗರ, ಮಾರುತಿ ಸೇವಾನಗರ, ಹೆಚ್.ಬಿ.ಆರ್ ಲೇಔಟ್, ಜೀವನ್ ಭೀಮಾನಗರ, ಸಿ.ವಿ ರಾಮನ್ ನಗರ, ಶಾಂತಿನಗರ ವಸಂತನಗರ ಉಪ ವಿಭಾಗಗಳಲ್ಲಿ ತಲಾ 10, ಹೆಬ್ಬಾಳ, ಕೆ.ಜಿ ಹಳ್ಳಿ ಉಪ ವಿಭಾಗಗಳಲ್ಲಿ ತಲಾ 11, ಪುಲೇಶಿನಗರ, ದೊಮ್ಮಲೂರು ಉಪ ವಿಭಾಗಗಳಲ್ಲಿ ತಲಾ 9 ಹಾಗೂ ಶಿವಾಜಿನಗರ ಉಪ ವಿಭಾಗದಲ್ಲಿ 8 ಸೇರಿದಂತೆ ಒಟ್ಟು 118 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
ಪಶ್ಚಿಮ ವಲಯ: ಪಶ್ಚಿಮ ವಲಯದಲ್ಲಿ ಬರುವ ಚಿಕ್ಕಪೇಟೆ, ಚಂದ್ರ ಲೇಔಟ್, ಚಾಮರಾಜಪೇಟೆ, ಗಾಂಧಿ ನಗರ, ಗೋವಿಂದರಾಜಪುರ, ಜೆ.ಜೆ.ಆರ್ ನಗರ, ಮಲ್ಲೇಶ್ವರ, ಮಹಾಲಕ್ಷ್ಮಿಪುರ, ಮತ್ತಿಕೆರೆ, ನಾಗಪುರ, ರಾಜಾಜಿನಗರ ಹಾಗೂ ಶ್ರೀರಾಮಮಂದಿರ ಉಪವಿಭಾಗಳಲ್ಲಿ ತಲಾ 10 ಆಸ್ತಿಗಳಂತೆ ಒಟ್ಟು 120 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
ದಕ್ಷಿಣ ವಲಯ: ದಕ್ಷಿಣ ವಲಯದಲ್ಲಿ ಬರುವ ಬಿಟಿಎಂ ಲೇಔಟ್, ಕೋರಮಂಗಲ, ಬನಶಂಕರಿ, ಪದ್ಮನಾಭನಗರ, ಜಯನಗರ, ಜೆ.ಪಿ ನಗರ, ಗಾಳಿ ಆಂಜನೇಯ ದೇವಸ್ಥಾನ, ವಿಜಯನಗರ, ಹೊಂಬೇಗೌಡ ನಗರ ಉಪವಿಭಾಗಳಲ್ಲಿ ತಲಾ 10, ಗಿರಿನಗರ ಉಪ ವಿಭಾಗದಲ್ಲಿ 8, ಬಸವನಗುಡಿ ಉಪ ವಿಭಾಗದಲ್ಲಿ 6 ಹಾಗೂ ಕೆಂಪೇಗೌಡ ನಗರ ಉಪ ವಿಭಾಗದಲ್ಲಿ 5 ಸೇರಿದಂತೆ ಒಟ್ಟು 109 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
ಮಹದೇವಪುರ ವಲಯ: ಮಹದೇವಪುರ ವಲಯದಲ್ಲಿ ಬರುವ ಹೊರಮಾವು, ಹೆಚ್.ಎ.ಎಲ್, ಕೆ.ಆರ್ ಪುರ, ಮಾರತಹಳ್ಳಿ, ಹೂಡಿ ಹಾಗೂ ವೈಟ್ ಫೀಲ್ಡ್ ಸೇರಿದಂತೆ ಉಪವಿಭಾಗಳಲ್ಲಿ ತಲಾ 10 ಆಸ್ತಿಗಳಂತೆ ಒಟ್ಟು 60 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ
ಬೊಮ್ಮನಹಳ್ಳಿ ವಲಯ: ಬೊಮ್ಮನಹಳ್ಳಿ ವಲಯದಲ್ಲಿ ಬರುವ ಬೇಗೂರು, ಉತ್ತರ ಹಳ್ಳಿ, ಯಲಚೇನಹಳ್ಳಿ, ಬೊಮ್ಮನಹಳ್ಳಿ, ಅರಕೆರೆ, ಹೆಚ್.ಎಸ್.ಆರ್ ಲೇಔಟ್ ಹಾಗೂ ಅಂಜನಾಪುರ ಉಪವಿಭಾಗಳಲ್ಲಿ ತಲಾ 10 ಆಸ್ತಿಗಳಂತೆ ಒಟ್ಟು 70 ಆಸ್ತಿಗಳನ್ನು 14ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
ಯಲಹಂಕ ವಲಯ: ಯಲಹಂಕ ವಲಯದಲ್ಲಿ ಬರುವ ಯಲಹಂಕ, ಯಲಹಂಕ ಸ್ಯಾಟಲೈಟ್ ಟೌನ್, ಬ್ಯಾಟರಾಯನಪುರ ಹಾಗು ವಿದ್ಯಾರಣ್ಯಪುರ ಉಪ ವಿಭಾಗಳಲ್ಲಿ ತಲಾ 10 ಆಸ್ತಿಗಳಂತೆ ಒಟ್ಟು 40 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
ಆರ್.ಆರ್ ನಗರ ವಲಯ: ಆರ್.ಆರ್ ನಗರ ವಲಯದಲ್ಲಿ ಬರುವ ಲಗ್ಗೆರೆ, ಆರ್.ಆರ್ ನಗರ, ಲಕ್ಷ್ಮಿದೇವಿನಗರ, ಯಶವಂತಪುರ ಉಪವಿಭಾಗಳಲ್ಲಿ ತಲಾ 10, ಕೆಂಗೇರಿ ಹಾಗೂ ಹೇರೋಹಳ್ಳಿ ಉಪ ವಿಭಾಗಗಳಲ್ಲಿ ತಲಾ 5 ಸೇರಿದಂತೆ ಒಟ್ಟು 50 ಆಸ್ತಿಗಳನ್ನು 10ನೇ ಫೆಬ್ರವರಿ 2025 ರಂದು ಹರಾಜು ಹಾಕಲಾಗುತ್ತದೆ.
ದಾಸರಹಳ್ಳಿ ವಲಯ: ದಾಸರಹಳ್ಳಿ ವಲಯದಲ್ಲಿ ಬರುವ ಶೆಟ್ಟಿಹಳ್ಳಿ, ದಾಸರಹಳ್ಳಿ, ಪೀಣ್ಯ ಉಪವಿಭಾಗಳಲ್ಲಿ ತಲಾ 10 ಹಾಗೂ ಹೆಗ್ಗನಹಳ್ಳಿ ಉಪ ವಿಭಾಗದಲ್ಲಿ 11 ಸೇರಿದಂತೆ ಒಟ್ಟು 41 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೂಲಕ ಬಿಬಿಏಂಪಿಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಶಾಕ್ ನೀಡಲಾಗಿದೆ.