ಚಾಮರಾಜನಗರ : ರೈತರ ಜಮೀನುಗಳಿಗೆ ಲಗ್ಗೆ ಒಟ್ಟು ರೈತರು ಬೆಳೆದ ಫಸಲುಗಳನ್ನು ನಾಶ ಮಾಡ್ತಾ ಇದ್ದಂತಹ ಗಜಪಡೆ ಗುಂಪು ಇದೀಗ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಉಡುತೊರೆ ಹಳ್ಳ ಜಲಾಶಯ ಸಮೀಪ ಪ್ರತ್ಯಕ್ಷವಾಗಿವೆ. ಹನೂರು ತಾಲೂಕಿನ ಕಾಂಚಳ್ಳಿ ಸುತ್ತಾಮುತ್ತಾ ಕಾಡಾನೆಗಳ ಹಿಂಡು ರೈತರ ಫಸಲು ನಾಶ ಮಾಡ್ತಾ ಇತ್ತು. ಇದೀಗ ಈ ಆನೆಗಳ ಹಿಂಡು ಉಡುತೊರೆಹಳ್ಳ ಜಲಾಶಯದ ಸಮೀಪ ಕುಡಿಯುವ ನೀರಿಗಾಗಿ ಆಶ್ರಯ ಪಡೆದಿವೆ ಎನ್ನಲಾಗಿದೆ.
ಗಜಪಡೆ ಹಲವು ದಿನಗಳಿಂದ ಹನೂರು ತಾಲೂಕಿನ ಕಾಂಚಳ್ಳಿ ಸುತ್ತಾಮುತ್ತಲಿನ ಗ್ರಾಮಗಳಲ್ಲಿ ರಾತ್ರೀ ವೇಳೆ ರೈತರ ಜಮೀನುಗಳಿಗೆ ನುಗ್ಗಿ ವರ್ಷದಿಂದ ಬೆಳೆದ ಫಸಲುಗಳನ್ನು ರಾತ್ರೋರಾತ್ರಿ ತಿಂದು ತುಳಿದು ನಾಶ ಪಡಿಸುತ್ತಿದ್ದವು. ಇದರಿಂದ ಬೇಸತ್ತು ಇಲ್ಲಿನ ರೈತರು ಮನೆಗಳನ್ನು ತೊರೆದು ಇಡೀ ರಾತ್ರಿ ಆನೆ ಕಾವಲಿಗೆ ಕೂರುವಂತಾಗಿತ್ತು. ಈ ವೇಳೆ ಹಲವು ಯುವ ರೈತರಿಗೆ ಆನೆ ಉಪಟಳದಿಂದ ಬೇಸತ್ತು, ಅರಣ್ಯ ಇಲಾಖೆಗೆ ದೂರು ನೀಡಿ ಕಾಡಿನಿಂದ ಹೊರಬಂದಿರುವ ಆನೆಗಳನ್ನು ಮತ್ತೆ ಕಾಡಿಗೆ ಓಡಿಸುವಂತೆ ಮನವಿ ಮಾಡಿದ್ದಾರೆ.