ಬೆಂಗಳೂರು: ಸಿಎಂ ಬದಲಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಅಂಗನವಾಡಿ ಪ್ರತಿಭಟನೆಯಲ್ಲಿ ಮಾತಾನಾಡಿದ ಅವರು, ಮುಂದಿನ ನವೆಂಬರ್ 15, 16ಕ್ಕೆ ಸಿಎಂ ಸಿದ್ದರಾಮಯ್ಯ ಗಂಟು ಮೂಟೆ ಕಟ್ಟಬೇಕಾಗುತ್ತೆ. ಡಿಕೆಶಿ ವರ್ಸಸ್ ಸಿದ್ದು ಮ್ಯೂಸಿಕಲ್ ಚೇರ್ ಸ್ಪರ್ಧೆ ಇರುತ್ತದೆ. ಇದು ಪಕ್ಕಾ ನ್ಯೂಸ್ ಅಂತಾ ವಿಪಕ್ಷ ನಾಯಕ ಆರ್. ಅಶೋಕ್ ಹೊಸ ಬಾಂಬ್ ಹಾಕಿದ್ದಾರೆ.
ಕಾಂಗ್ರೆಸ್ನಲ್ಲಿ ಈಗಾಗಲೇ ಒಪ್ಪಂದ ಆಗಿದೆ. ನಾನು ಜ್ಯೋತಿಷಿ ಅಲ್ಲ ಆದ್ರೆ ನಂಗೆ ಕಾಂಗ್ರೆಸ್ನಲ್ಲಿ ಸ್ನೇಹಿತರು ಇದ್ದಾರೆ, ಹೀಗಾಗಿ ಈ ವಿಚಾರ ತಿಳಿದಿದೆ. ಡಿಕೆಶಿ ಕುರ್ಚಿ ಒದ್ದಾದ್ರೂ ಅಧಿಕಾರ ಕಿತ್ತುಕೊಳ್ತಾರೆ ಅಂತಾ ಆಶೋಕ್ ಹೇಳಿದ್ದಾರೆ.
ಇದೇ ವೇಳೆ ಅಂಗನವಾಡಿ ಕಾರ್ಯಕರ್ತರಿಗೆ ಸರ್ಕಾರ ವಂಚನೆ ಮಾಡಿದೆ. 5ನೇ ಗ್ಯಾರಂಟಿ ಘೋಷಣೆ ಮಾಡ್ತೀವಿ ಅಂತಾ ಭರವಸೆ ಕೊಟ್ಟು ಮೋಸ ಮಾಡಿದೆ. ಬೇಡಿಕೆ ಈಡೇರುವ ತನಕ ಪಕ್ಷ ನಿಮ್ಮೊಂದಿಗೆ ಇರಲಿದೆ ಅಂದ್ರು. ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಅಡ್ಡಿಪಡಿಸಿ ಟೆಂಟ್ ಕಿತ್ತುಕೊಳ್ಳೋಕೆ ಸಿದ್ದು ಸರ್ಕಾರ ಮುಂದಾಗಿದೆ. ನಿಮ್ಮ ಟೆಂಟ್ ಕಿತ್ತುಕೊಳ್ತಾರೆ ಇರೋ ಸ್ವಲ್ಪ ದಿನದಲ್ಲಿ ಇವರಿಗೆ ಒಳ್ಳೆಯದು ಮಾಡಿ ಅಂತಾ ಲೇವಡಿ ಮಾಡಿದ್ರು.