ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ನಿರಾಳರಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜಾಮೀನು ಪಡೆದು ಹೊರ ಬಂದಿರುವ ನಟ ಇದೀಗ ಸಾರ್ವಜನಿಕವಾಗಿ ಕಾಣಿಸಿಕೊಳ್ತಿದ್ದಾರೆ. ಈ ಮಧ್ಯೆ ಸದ್ಯದಲ್ಲೇ ದರ್ಶನ್ ಹುಟ್ಟುಹಬ್ಬವಿದ್ದು ನೆಚ್ಚಿನ ನಟನ ಬರ್ತಡೇಯನ್ನು ಭರ್ಜರಿಯಾಗಿ ಆಚರಿಸಲು ಅಭಿಮಾನಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಫೆ. 16ರಂದು ನಟ ದರ್ಶನ್ ಬರ್ತಡೆ. ಈಹಿನ್ನೆಲೆಯಲ್ಲಿ ಅಭಿಮಾನಿಗಳು ದರ್ಶನ್ ಬಂಧನದ ನೋವನ್ನೆಲ್ಲಾ ಮರೆತು ಅದ್ದೂರಿಯಾಗಿ ಬರ್ತಡೇ ಆಚರಿಸಲು ರೆಡಿಯಾಗಿದ್ದಾರೆ. ಬರ್ತಡೇ ಹಿನ್ನೆಲೆಯಲ್ಲಿ ನಟನ ಕಡೆಯಿಂದ ಏನಾದರೂ ಸರ್ಪ್ರೈಸ್ ಕಾದಿದ್ಯಾ? ಎಂದು ಅಭಿಮಾನಿಗಳು ಕಾಯ್ತಿದ್ದಾರೆ.
ಪ್ರತಿ ವರ್ಷ ನಟನ ಹೆಸರಲ್ಲಿ ಅಭಿಮಾನಿಗಳು ದವಸ ದಾನ್ಯ ವಿತರಿಸೋದು, ಅನ್ನದಾನ, ರಕ್ತದಾನ ಹೀಗೆ ನಾನಾ ಕಾರ್ಯಗಳನ್ನು ಮಾಡುತ್ತಾರೆ. ಅಂತೆಯೇ ಈ ವರ್ಷವು ಅದನ್ನೇ ಮದುವರೆಸಿಕೊಂಡು ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್ ತಮ್ಮನ್ನು ಭೇಟಿಯಾಗುತ್ತಾರಾ, ಹುಟ್ಟುಹಬ್ಬ ಆಚರಿಸಿಕೊಳ್ತಾರೆ ಎಂದು ಅಭಿಮಾನಿಗಳು ಯೋಚನೆ ಮಾಡ್ತಿದ್ದಾರೆ. ಆದರೆ ದರ್ಶನ್ ಹುಟ್ಟುಹಬ್ಬವನ್ನು ಹಬ್ಬದಂತೆ ಸಂಭ್ರಮಿಸಲು ಫ್ಯಾನ್ಸ್ ರೆಡಿಯಾಗಿದ್ದಾರೆ. ಜೊತೆಗೆ ದರ್ಶನ್ ಕಡೆಯಿಂದ ಯಾವುದಾದರು ಸಪ್ರೈಸ್ ನ್ಯೂಸ್ ಕಾದಿದೆಯಾ ಎಂದು ಕಾಯ್ತಿದ್ದಾರೆ.