ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಹಾಗೂ ಖ್ಯಾತ ನಿರೂಪಕಿ ಚೈತ್ರಾ ವಾಸುದೇವನ್ 2ನೇ ಮದುವೆಗೆ ಸಜ್ಜಾಗಿದ್ದಾರೆ. ಇದೀಗ ನಟಿ ತಾವು ಮದುವೆಯಾಗುತ್ತಿರುವ ಹುಡುಗ ಯಾರೆಂಬುದು ಫೋಟೋ ಮೂಲಕ ರಿವೀಲ್ ಮಾಡಿದ್ದಾರೆ.
ಇತ್ತೀಚೆಗೆ ಪ್ಯಾರೀಸ್ನಲ್ಲಿ ಚೈತ್ರಾ ವಾಸುದೇವನ್ ಭಾವಿ ಪತಿ ಜೊತೆ ಫೋಟೋಶೂಟ್ ಮಾಡಿಸಿದ್ದರು. ಈ ವೇಳೆ ತಾವು 2ನೇ ಮದುವೆ ಆಗುತ್ತಿರೋದಾಗಿ ಹೇಳಿಕೊಂಡಿದ್ದರು. ಆದರೆ ಹುಡುಗ ಯಾರು ಎಂಬ ಸುಳಿವನ್ನು ಮಾತ್ರ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಭಾವಿ ಪತಿ ಜೊತೆಗಿನ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ.
ಜಗದೀಪ್ ಎಲ್ ಎಂಬ ಉದ್ಯಮಿಯನ್ನು ಚೈತ್ರಾ ಮದುವೆ ಆಗುತ್ತಿದ್ದಾರೆ. ಇಬ್ಬರೂ ಪಿಂಕ್ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ದೇವಸ್ಥಾನವೊಂದರಲ್ಲಿ ತೆಗೆದ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ. ನವ ಜೋಡಿಗೆ ಹಲವರು ಶುಭ ಹಾರೈಸಿದ್ದಾರೆ.
ಚೈತ್ರಾ ತಮ್ಮ ಡಿಗ್ರಿ ಮುಗಿಯುತ್ತಿದ್ದಂತೆ ಸತ್ಯ ನಾಯ್ಡು ಎನ್ನುವ ಉದ್ಯಮಿ ಜೊತೆ ಮದುವೆಯಾಗಿದ್ದರು. 5 ವರ್ಷಗಳ ಬಳಿಕ ಡಿವೋರ್ಸ್ ಪಡೆದು ಇಬ್ಬರು ದೂರ ದೂರವಾಗಿದ್ದರು. ಇದೀಗ ಚೈತ್ರಾ ಮತ್ತೊಂದು ಮದುವೆಗೆ ಸಜ್ಜಾಗಿದ್ದಾರೆ.