ಬಾಲಿವುಡ್ ನಟ ಆಮೀರ್ ಖಾನ್ ಅವರು ಸಿನಿಮಾಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರವಾಗಿಯೇ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಆಮೀರ್ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗುತ್ತಿವೆ. ಈ ಮಧ್ಯೆ ಆಮೀರ್ ಸದ್ದಿಲ್ಲದೆ ಮೂರನೇ ಮದುವೆಗೆ ಸಜ್ಜಾಗಿದ್ದು ಬೆಂಗಳೂರಿನ ಬೆಡಗಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.
ಆಮೀರ್ ಖಾನ್ ಬೆಂಗಳೂರಿನ ಬೆಡಗಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಯುವತಿಯನ್ನು ನಟ ತಮ್ಮ ಕುಟುಂಬಸ್ಥರಿಗೆ ಪರಿಚಯಿಸಿದ್ದಾರಂತೆ. ಇಬ್ಬರೂ ಸೀರಿಯಸ್ ರಿಲೇಷನ್ಶಿಪ್ನಲ್ಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
59ನೇ ವಯಸ್ಸಿಗೆ ಆಮೀರ್ ಮದುವೆಗೆ ಸಿದ್ಧರಾಗಿದ್ದಾರೆ ಎನ್ನಲಾದ ಸುದ್ದಿ ಫ್ಯಾನ್ಸ್ಗೆ ಅಚ್ಚರಿ ಮೂಡಿಸಿದೆ. ಮೊದಲು ರೀನಾ ದತ್ ಅವರನ್ನು 1986ರಲ್ಲಿ ಆಮೀರ್ ಖಾನ್ ಮದುವೆಯಾಗಿದ್ದರು. ಬಳಿಕ 2002ರಲ್ಲಿ ಡಿವೋರ್ಸ್ ಪಡೆದು 2005ರಲ್ಲಿ ಕಿರಣ್ ರಾವ್ ಅವರೊಂದಿಗೆ ಮದುವೆಯಾದರು. ಆದರೆ 2021ರಲ್ಲಿ ಕಿರಣ್ ರಾವ್ ರಿಂದ ಡಿವೋರ್ಸ್ ಪಡೆದಿದ್ದು ಇದೀಗ ಮೂರನೇ ಮದುವೆಗೆ ಸಜ್ಜಾಗಿದ್ದಾರೆ.