ಬಾಗಲಕೋಟೆ:– ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 8ನೇ ಬಜೆಟ್ ಮಂಡನೆ ಮಾಡಿದ್ದಾರೆ. ಸಂಸತ್ ಇತಿಹಾಸದಲ್ಲಿ ಹೆಚ್ಚು ಬಜೆಟ್ ಮಂಡಿಸಿದ ಮಹಿಳಾ ಹಣಕಾಸು ಮಂತ್ರಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.
Hubballi: ಕೇಂದ್ರ ಬಜೆಟ್ ದೇಶದ ಸಮಗ್ರ ಅಭಿವೃದ್ದಿಗೆ ನೀಲನಕ್ಷೆ- ಡಾ. ಕ್ರಾಂತಿ ಕಿರಣ್!
12 ಲಕ್ಷ ರೂಪಾಯಿವರೆಗೂ ಆದಾಯ ತೆರಿಗೆ ಇಲ್ಲ
4 ಲಕ್ಷದಿಂದ 8 ಲಕ್ಷದವರೆಗೆ ಶೇ.5ರಷ್ಟು ತೆರಿಗೆ 8 ಲಕ್ಷದಿಂದ 11 ಲಕ್ಷದವರೆಗೆ ಶೇ.10ರಷ್ಟು ತೆರಿಗೆ
12 ಲಕ್ಷದಿಂದ 15 ಲಕ್ಷದವರೆಗೆ ಶೇ.15ರಷ್ಟು ತೆರಿಗೆ, 15 ಲಕ್ಷದಿಂದ 20 ಲಕ್ಷದವರೆಗೆ ಶೇ.20ರಷ್ಟು ತೆರಿಗೆ
20 ಲಕ್ಷದಿಂದ 24 ಲಕ್ಷದರೆಗೆ ಶೇ.25ರಷ್ಟು ತೆರಿಗೆ, 24 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ. ಇದೊಂದು ಐತಿಹಾಸಿಕ ನಿರ್ಣಯವಾಗಿದೆ.
ಸ್ಟಾರ್ಟ್ ಅಪ್ ಉದ್ಯೋಗಕ್ಕೆ ಹೆಚ್ಚಿನ ಒತ್ತು ಕೊಟ್ಟಿದೆ ಮೇಕ್ ಇನ್ ಇಂಡಿಯಾ ಗೆ ಉತ್ತೇಜನ ನೀಡಲಾಗಿದೆ ಆಟಿಕೆಗಳ ತಯಾರಿಕೆಗೆ ಒತ್ತು, ಮೇಕ್ ಇನ್ ಇಂಡಿಯಾ ಬ್ರ್ಯಾಂಡ್ ಜೊತೆ ಆಟಿಕೆ ತಯಾರಿಕೆ, ಆಟಿಕೆಗಳ ತಯಾರಿಕೆ ವಲಯಕ್ಕಾಗಿ ಕ್ರಮ
ಭಾರತವನ್ನು ಜಾಗತಿಕ ಆಟಿಕೆ ಉತ್ಪಾದನಾ ಕೇಂದ್ರವನ್ನಾಗಿ ಮಾಡಲುಯೋಜನೆಗೆ ಒತ್ತು ನೀಡಲಾಗಿದೆ ಇದನ್ನೆಲ್ಲಾ ಮೀರಿ ಕೃಷಿ ಕ್ಷೇತ್ರಕ್ಕೆ ಅಧಿಕ ಒತ್ತು ನೀಡಿ ಕೃಷಿಯೇ ಅಭಿರುದ್ದಿಯ ಮೊದಲ ಎಂಜಿನ ಎಂದು ಹೇಳಿ ಕೃಷಿಕರ ಧನ್-ಧಾನ್ಯ ಯೋಜನೆಗೆ ಮಹತ್ವಪೂರ್ಣ ಯೋಜನೆ ರೂಪಿಸಿರುವುದು ಸಂತಸ ತಂದಿದೆ. ನಾಗರಾಭಿರೂದ್ದಿಗೆ 1ಲಕ್ಷ ಕೋಟಿ ರೂ ಮಿಸಾಲಿಡಲಾಗಿದೆ.
ರೈತರಿಗೆ ಮತ್ತಷ್ಟು ಸಾಲವನ್ನು ನೀಡುವ ದೃಷ್ಟಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್ನ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಸಿಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಬಜೆಟ್ನಲ್ಲಿ ಬಡವರು, ಯುವಕರು, ರೈತರು, ಮಹಿಳೆಯರ ಅಭಿವೃದ್ಧಿ ಸೇರಿದಂತೆ ಒಟ್ಟು ಪ್ರಮುಖ 10 ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಹೆಚ್ಚಿನ ಗಮನಹರಿಸಲಾಗಿದೆ. ಇದನ್ನು ವಿಶೇಷವಾಗಿ ಮಧ್ಯಮ ವರ್ಗದವರ “ಕನಸಿನ ಬಜೆಟ್” ಎಂದು ಅರ್ಥಶಾಸ್ತ್ರ ಉಪನ್ಯಾಸಕರು ಪ್ರೊ. ರಾಜೇಶ್ ಪಿ ನೋಟದ ಹೇಳಿದರು.