ಮಂಡ್ಯ:- ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕೊನ್ನಾಪುರ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದಾಗಿ ತಾಯಿ ಪ್ರೇಮಾ ಆತ್ಮಹತ್ಯೆ ಮಾಡಿಕೊಂಡಿರುವ ಬೆನ್ನಲ್ಲೇ ಇದೀಗ ಮಗನೂ ಸಹ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ.
ನೀವು ಹೆಚ್ಚು ಸ್ಟ್ರಾಂಗ್ ಇರ್ಬೇಕಾ!? ಹಾಗಿದ್ರೆ ಹೆಸರುಕಾಳು ತಿನ್ನಿ! ಆಮೇಲೆ ನೋಡಿ ಚಮತ್ಕಾರ!
4 ದಿನದ ಹಿಂದೆ ಅಷ್ಟೇ ಪ್ರೇಮಾ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆದ್ರೆ, ಮೊನ್ನೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ತಾಯಿಯನ್ನು ಕಳೆದುಕೊಂಡು ಮನನೊಂದು ಪುತ್ರ ರಂಜಿತ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹಲಗೂರು ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ರಂಜಿತ್ ಶವ ಪತ್ತೆಯಾಗಿದೆ. ತಾಯಿ ಸತ್ತ ದಿನವೇ ಅಂದರೆ ಎರಡ್ಮೂರು ದಿನದ ಹಿಂದೆ ರಂಜಿತ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತಾಯಿ ಪ್ರೇಮಾ ಸಾವಿನ ಆಘಾತದಿಂದ ಮನನೊಂದಿದ್ದ. ಜೊತೆ ಅನಾರೋಗ್ಯಕ್ಕೆ ತುತ್ತಾಗಿ ಅಂಗವೈಕಲ್ಯದಿಂದ ಬಳಲುತ್ತಿದ್ದ. ಮುಂದೆ ಜೀವನ ಹೇಗೆ ಎಂದು ಚಿಂತೆಗೀಡಾಗಿದ್ದ. ಈ ಕಾರಣದಿಂದ ಪ್ರಾಣ ಕಳೆದುಕೊಂಡಿದ್ದಾರೆ.