ಬೆಂಗಳೂರು:- ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಬೆಸ್ಕಾಂ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಖಾಲಿಯಿರುವ 510 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಅರ್ಜಿ ಸಲ್ಲಿಸಬಯಸುವವರು ಯಾವೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ
ಬಜೆಟ್ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಏನು? ಕನ್ನಡಿಗರಿಗೆ ಮತ್ತೆ ಅನ್ಯಾಯವಾ?
ಈ ಹುದ್ದೆಗಳಿಗೆ ಡಿಪ್ಲೋಮಾ, ಬಿಇ, ಬಿ.ಟೆಕ್, ಬಿಎ, ಇತರೆ ಯಾವುದೇ ಡಿಗ್ರಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲಾ ಬ್ರ್ಯಾಂಚ್ಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ 2024-25ನೇ ಸಾಲಿನ ಇಂಜಿನಿಯರಿಂಗ್ ಗ್ರಾಜುಯೇಟ್ಸ್ / ನಾನ್ ಇಂಜಿನಿಯರಿಂಗ್ ಗ್ರಾಜುಯೇಟ್ಸ್ / ಡಿಪ್ಲೋಮಾ ಟೆಕ್ನೀಷಿಯನ್ಗಳನ್ನು ಭರ್ತಿ ಮಾಡುತ್ತಿದೆ. ಬಿ.ಇ. / ಬಿ.ಟೆಕ್ – ಇ ಅಂಡ್ ಇ ಇಂಜಿನಿಯರಿಂಗ್ 130, ಬಿ.ಎ/ ಬಿ.ಎಸ್ಸಿ/ ಬಿಕಾಂ/ ಬಿಬಿಎ/ಬಿಸಿಎ/ ಬಿಬಿಎಮ್/ ಬಿ.ಇ./ ಬಿ.ಟೆಕ್ (ಇ&ಇ ಇಂಜಿನಿಯರಿಂಗ್ ಹೊರತುಪಡಿಸಿ) 305, ಡಿಪ್ಲೋಮಾ ಪಾಸದವರಿಗೆ 75 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಬಿ.ಇ. / ಬಿ.ಟೆಕ್ – ಇ ಅಂಡ್ ಇ ಇಂಜಿನಿಯರಿಂಗ್ 9,008 ರೂಪಾಯಿ, ಬಿ.ಎ/ ಬಿ.ಎಸ್ಸಿ/ ಬಿಕಾಂ/ ಬಿಬಿಎ/ಬಿಸಿಎ/ ಬಿಬಿಎಮ್/ ಬಿ.ಇ./ ಬಿ.ಟೆಕ್ (ಇ&ಇ ಇಂಜಿನಿಯರಿಂಗ್ ಹೊರತುಪಡಿಸಿ 9,008 ರೂಪಾಯಿ, ಡಿಪ್ಲೋಮಾ ಪಾಸಾದ ಅಭ್ಯರ್ಥಿಗಳಿಗೆ ಮಾಸಿಕ 8,000 ರೂಪಾಯಿ ವೇತನ ನೀಡಲಾಗುತ್ತದೆ.
ಅಭ್ಯರ್ಥಿಗಳಿಗೆ 01 ವರ್ಷ ತರಭೇತಿ ನೀಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ ಫೆಬ್ರವರಿ 1ರಿಂದ ಆರಂಭವಾಗಲಿದ್ದು, ಕೊನೇ ದಿನಾಂಕ ಫೆಬ್ರವರಿ 20 ಆಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಇಂಜಿನಿಯರಿಂಗ್ ಪದವೀಧರರು, ಇತರೆ ತಾಂತ್ರಿಕೇತರ ವಿಷಯಗಳ ಪದವೀಧರರು, ಡಿಪ್ಲೊಮಾ ಈ ಎಲ್ಲಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು 2020ರ ನಂತರ ಹುದ್ದೆಗಳಿಗೆ ಸಂಬಂಧಿತ ಶಿಕ್ಷಣಗಳನ್ನು ಪಡೆದಿರಬೇಕು.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧಿಕೃತ ವೆಬ್ಸೈಟ್ https://bescom.karnataka.gov.inಗೆ ಭೇಟಿ ನೀಡಬಹುದಾಗಿದೆ