ಕೋಲಾರ – ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಕೇಂದ್ರದ ಬಿಜೆಪಿ ಸರ್ಕಾರದ ಮನೆ ಬಜೆಟ್ ಹಾಗಿದೆ. ಬಿಜೆಪಿ ಸರ್ಕಾರಗಳು ಯಾವ ರಾಜ್ಯದಲ್ಲಿ ಇದೆ, ಅಲ್ಲಿ ಹೆಚ್ಚು ಅನುದಾನ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಿಗೆ ಅನುದಾನವನ್ನು ಕಡಿಮೆ ನೀಡಲಾಗಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಬಜೆಟ್ ಸ್ವಾವಲಂಬಿ, ಸಮೃದ್ಧ, ವಿಕಸಿತ ಭಾರತದ ಬುನಾದಿ ; ಅರವಿಂದ ಬೆಲ್ಲದ್
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವ್ರು, ರಾಜಕೀಯ ಬಂದಾಗ ಏನು ಬೇಕಾದರೂ ಮಾಡೋಣ ಹೊಡೆದಾಡೋಣ ಆದರೆ ಸರ್ಕಾರ ಅಂತ ಬಂದಾಗ ಮತ ಹಾಕಿಸಿಕೊಳ್ಳೋದು, ಗೆಲುವು ಸೋಲು ಇರುತ್ತೆ. ಸರ್ಕಾರ ಅಂತ ಬಂದಾಗ ರಾಜ್ಯದಲ್ಲಿ ಕೇಂದ್ರದಲ್ಲಿ ಭಾರತ ದೇಶದಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಅಂತ ಹೇಳಲಾಗಿತ್ತು . ಅದರಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಅಂತ ಹೇಳಿಲ್ಲ ಎಲ್ಲರಿಗೂ ಫ್ರೀ ಅಂತ ಹೇಳಿದ್ದೀವಿ. ಅದರಂತೆ ಎಲ್ಲರಿಗೂ ಉಚಿತ ಪ್ರಯಾಣ ನೀಡಲಾಗಿದೆ. ಯಾವ ಯಾವ ರಾಜ್ಯದಲ್ಲಿ ಜನಸಂಖ್ಯೆ ಇದೆ ಆಧಾರದ ಮೇಲೆ ಅನುದಾನವನ್ನು ನೀಡಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಈ ಬಜೆಟ್ ನ್ನು ನಾವು ವಿರೋಧ ಮಾಡುತ್ತೇವೆ ಎಂದರು.