ಧಾರವಾಡ : ಧಾರವಾಡ ಜಿಲ್ಲಾ ನ್ಯಾಯಾಲಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ. ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಇರುವ ಸಿಬಿಐ ಕೋರ್ಟ್ ನಲ್ಲಿ ತಪಾಸಣೆ ನಡೆಸಲಾಯಿತು. ಫಾರೆನರ್ಸ್ ರಿಜನಲ್ ರೆಜಿಸ್ಟ್ರೆಷನ್ ಆಫೀಸಿನಿಂದ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ ಮೂಲಕ ಸಂದೇಶ ಕಳುಹಿಸಲಾಗಿತ್ತು. ಈ ಮೇಲ್ ಆಧಾರದ ಮೇಲೆ ಕೋರ್ಟ್ ಹಾಲ್ ನಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದಿಂದ ತಪಾಸಣೆ ನಡೆಸಲಾಯಿತು.
ಮೇಲ್ ಮೂಲಕ ನ್ಯಾಯಾಲಯಕ್ಕೆ ಹುಸಿ ಬೆದರಿಕೆ ಮೇಲ್ ಬಂದಿತ್ತು. ಇದನ್ನ ನ್ಯಾಯಾಲಯದವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧಾರದ ಮೇಲೆ ತಪಾಸಣೆ ಮಾಡಲಾಗಿದ್ದು, ಸದ್ಯ ಕೋರ್ಟ್ ಹಾಲ್ ನಲ್ಲಿ ಯಾವುದೇ ವಸ್ತು ಸಿಗದೇ ವಾಪಸ್ ಆಗಿದ್ದಾರೆ. ಹೀಗಾಗಿ ಇದು ಸುಳ್ಳು ಬೆದರಿಕೆ ಮೇಲ್ ಇರಬಹುದು ಎಂದು ಪೊಲೀಸ್ ಮಾಹಿತಿ ನೀಡಿದ್ದಾರೆ.