ಬೀದರ್ : ಔರಾದ್ ಕ್ಷೇತ್ರದಲ್ಲಿ ಸತತ 2009ರಿಂದ ಪ್ರತಿ ವರ್ಷ ಗ್ರಾಮ ಸಂಚಾರಾಧಿಕಾರಿಗಳ ತಂಡದೊಂದಿಗೆ ಗ್ರಾಮಕ್ಕೆ ಭೇಟಿ ಮಾಡಿ, ಜನತೆಯ ಎಲ್ಲಾ ಅಹವಾಲು ಸ್ಥಳದಲ್ಲಿ ಪರಿಹಾರ ಮಾಡಲಾತ್ತದೆ. ಈ ವರ್ಷ 157 ಹಳ್ಳಿ ಗಳಿಗೆ ಗ್ರಾಮ ಸಂಚಾರ ಮಾಡಲಾಗಿದೆ. ಔರಾದ ತಾಲೂಕಿನಲ್ಲಿ ಶಿಕ್ಷಣ ವ್ಯವಸ್ಥೆ ಹಳಿ ತಪ್ಪಿದ್ದು, ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆ, ಜಲ ಜೀವನ್ ಮಿಷನ್ ಕಾಮಗಾರಿ ಲೋಪದ ವಿರುದ್ಧ ಸರ್ಕಾರಕ್ಕೆ ದೂರು ಸಲ್ಲಿಸುವುದಾಗಿ ಶಾಸಕ ಪ್ರಭು ಚವ್ಹಾಣ್ ನಡೆಸಿದರು.
ಬಳ್ಳಾರಿ ಬಿಮ್ಸ್ ನಲ್ಲಿ ಮತ್ತೊಬ್ಬ ಬಾಣಂತಿ ಸಾವು ; ವೈದ್ಯರ ನಿರ್ಲಕ್ಷ್ಯ ಆರೋಪ
ಔರಾದ್ ಶಾಸಕ ಪ್ರಭು ಚವ್ಹಾಣ್ ಕಳೆದ ಒಂದು ತಿಂಗಳಿಂದ ಗ್ರಾಮ ಸಂಚಾರ ನಡೆಸಿದ್ದಾರೆ. ಇಂದು ವಡಗಾಂವ್ ಗ್ರಾಮದಲ್ಲಿ ಗ್ರಾಮ ವಾಸ್ತವ್ಯದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಎರಡು ವರ್ಷಗಳಿಂದ ಔರಾದ್ ತಾಲೂಕಿನಲ್ಲಿ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಹೆಚ್ಚು ಮಕ್ಕಳಿದ್ದ ಕಡೆ ಶಿಕ್ಷಕರಿಲ್ಲ. ಕೆಲ ಶಾಲೆಗಳಲ್ಲಿ ಮಕ್ಕಳಿಗಿಂತ ಶಿಕ್ಷಕರೇ ಜಾಸ್ತಿ ಇದ್ದಾರೆ. ಹೀಗಾದರೆ ಸರ್ಕಾರಿ ಶಾಲೆಗಳು ಹೇಗೆ ಉಳಿಯುತ್ತವೆ. ತಾಲೂಕಿನಲ್ಲಿ ಈ ರೀತಿ ಅವ್ಯವಸ್ಥೆ ಆಗಲು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರೇ ನೇರ ಹೊಣೆ. ಅವರು ಒಮ್ಮೆಯೂ ತಾಲೂಕಿಗೆ ಭೇಟಿ ಕೊಟ್ಟಿಲ್ಲ. ತಪ್ಪು ಮಾಡಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಉತ್ತಮ ಶಿಕ್ಷಕರಿಗೆ ತೊಂದರೆ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಪೂರ್ಣಕಾಲಿಕ ಕೆಲಸ ಮಾಡುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಲ್ಲ. ಸರಿಯಾದ ಮೇಲ್ವಿಚಾರಣೆ ಇಲ್ಲದೇ ಎರಡು ವರ್ಷದಿಂದ ಎಸ್ಎಸ್ಎಲ್ಸಿ ಫಲಿತಾಂಶ ಕುಸಿಯುತ್ತಿದೆ ಎಂದು ಅಸಮಾಧಾನ ಕಳವಳ ವ್ಯಕ್ತಪಡಿಸಿದರು.
ಇನ್ನು ತಾಲ್ಲೂಕಿನಲ್ಲಿ ಬಿಐಎಸ್ ಸಂಸ್ಥೆಯಿಂದ ಅಂಗನವಾಡಿಗಳಲ್ಲಿ ಮಕ್ಕಳಿಗೆ ಕಳಪೆ ಆಹಾರ ಪೂರೈಕೆಯಾಗುತ್ತಿದೆ. ಇದು ಮನುಷ್ಯ ತಿನ್ನುವ ಆಹಾರವೇ ಎಂದು ಕಿಡಕಾರಿದರು. ರಾಜ್ಯ ಮಟ್ಟದ ಬಿಐಎಸ್ ಏಜೆನ್ಸಿಯವರು ಈ ರೀತಿ ಕಳಪೆ ಆಹಾರ ಪೂರೈಕೆ ಮಾಡುತ್ತಿದ್ದು ಅವರ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಪತ್ರ ಬರೆಯತ್ತೇನೆ. ಔರಾದ್ ಕ್ಷೇತ್ರದಲ್ಲಿ ₹250 ಕೋಟಿ ಜೆಜೆಎಂ ಕಾಮಗಾರಿ ನಡೆಯುತ್ತಿದೆ. 40 ಕಾಮಗಾರಿ ಹೊರತುಪಡಿಸಿದರೆ ಉಳಿದ 236 ಕಾಮಗಾರಿ ಕಳೆಪಯಾಗಿವೆ ಎಂದು ಆರೋಪಿಸಿದರು.