ಬಳ್ಳಾರಿ : ಬಿಮ್ಸ್ನಲ್ಲಿ ಮತ್ತೆ ಬಾಣಂತಿಯರ ಸಾವು ಮುಂದುವರೆದಿದ್ದು, ಬಳ್ಳಾರಿಯಲ್ಲಿ ಮತ್ತೊಬ್ಬ ಬಳ್ಳಾರಿಯಲ್ಲಿ ಮತ್ತೊಬ್ಬ ಬಾಣಂತಿ ಸಾವನ್ನಪ್ಪಿದ್ದಾರೆ. ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ 21 ವರ್ಷದ ಬಾಣಂತಿ ಮೃತಪಟ್ಟಿದ್ದಾರೆ.
ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ಮಹಾದೇವಿ ಹೆರಿಗೆಯಾಗಿ ವಾರದ ಬಳಿಕ ಸಾವನ್ನಪ್ಪಿದ್ದಾರೆ. ಕಳೆದ ಜ.25ರಂದು ಮಹಾದೇವಿಗೆ ಬಿಮ್ಸ್ ವೈದ್ಯರು ಸಿಜರೀನ್ ಮಾಡಿ ಹೆರಿಗೆ ಮಾಡಿಸಿದ್ದು, ಹೆಣ್ಣು ಮಗು ಜನಿಸಿತ್ತು. ಸಿಜರೀನ್ ಬಳಿಕ ಆರಾಮವಾಗಿದ್ದ ಮಹಾದೇವಿ ಸಾವನ್ನಪ್ಪಿದ್ದಾಳೆ. ಸದ್ಯ ಮಗು ಆರೋಗ್ಯವಾಗಿದೆ. ಸಿಜರಿಯೇನ್ ಬಳಿಕ ಮಹಾದೇವಿ ಆರಾಮವಾಗಿದ್ರು. ಆದ್ರೆ ಐದು ದಿನದ ಬಳಿಕ ಮಹಾದೇವಿಗೆ ಇನ್ಫೆಕ್ಷನ್ ಆಗಿದೆ ಎಂದು ವೈದ್ಯರು ಹೇಳಿದ್ದರಂತೆ. ನಿನ್ನೆ ರಾತ್ರಿ ಮಹಾದೇವಿ ತೀವ್ರ ಅಸ್ವಸ್ಥವಾಗಿ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಮಹಾದೇವಿ ಸಾವಾಗಿದೆ ಎಂದು ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, ಬಿಮ್ಸ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.