ಬೆಳಗಾವಿ : ಬೆಳಗಾವಿಯಲ್ಲಿ ಎಸ್.ಡಿ.ಎ ರುದ್ರಣ್ಣ ಯಡವಣ್ಣವರ್ ಆತ್ಮಹತ್ಯೆ ಪ್ರಕರಣ ಸಂಬಂಧ ತಹಶೀಲ್ದಾರ್ ವಿರುದ್ಧದ ಎಫ್ಐಆರ್ ಗೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ತಹಶೀಲ್ದಾರ್ ಬಸವರಾಜ್ ನಾಗರಾಳ ವಿರುದ್ಧದ ಎಫ್.ಐ.ಆರ್ ಗೆ ತಡೆಯಾಜ್ಞೆ ನೀಡಿ ಧಾರವಾಡ ಹೈಕೋರ್ಟ್ ಆದೇಶ ಹೊರಡಿಸಿದೆ.
ಕಾರ್ಮಿಕರು ತೆರಳುತ್ತಿದ್ದ ವಾಹನ ಪಲ್ಟಿ: ತುಮಕೂರಿನಲ್ಲಿ ತಪ್ಪಿದ ದುರಂತ!
ಕಳೆದ 2024 ನವೆಂಬರ್ 5 ರಂದು ಎಸ್.ಡಿ.ಎ ರುದ್ರಣ್ಣ ಬೆಳಗಾವಿ ತಹಶೀಲ್ದಾರ ಕಚೇರಿ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ಮೂರು ಜನ ಕಾರಣವೆಂದು ಆಫೀಸ್ ವಾಟ್ಸಪ್ ಗ್ರೂಪ್ ನಲ್ಲಿ ಮೆಸೇಜ್ ಹಾಕಿದ್ದರು. ಇದರಲ್ಲಿ ತಹಶೀಲ್ದಾರ ಬಸವರಾಜ್ ನಾಗರಾಳ, ಎಫ್.ಡಿ.ಸಿ ಅಶೋಕ ಕಬ್ಬಲಿಗೇರ್, ಸಚಿವೆ ಪಿಎ ಸೋಮು ಹೆಸರು ಉಲ್ಲೇಖಿಸಲಾಗಿತ್ತು. ಇದನ್ನ ಆಧರಿಸಿ ರುದ್ರಣ್ಣ ತಾಯಿಯಿಂದ ಮೂವರ ವಿರುದ್ಧ ಕೇಸ್ ದಾಖಲಿಸಿದ್ದರು. ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿತ್ತು. ತನ್ನ ವಿರುದ್ಧ ಎಫ್.ಐ.ಆರ್ ಪ್ರಶ್ನಿಸಿ ತಹಶಿಲ್ದಾರ ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದರು. ಸದ್ಯ ಹೈಕೋರ್ಟ್ ಎಫ್.ಐ.ಆರ್ ದಾಖಲಿಸದಂತೆ ತಡೆಯಾಜ್ಞೆ ನೀಡಿದೆ.