ಹುಬ್ಬಳ್ಳಿ : ನಮ್ಮ ಬೆವರು, ನಮ್ಮ ದುಡಿಮೆ ಅವರಿಗೆ ಬೇಕಂತೆ ನೆರವು ಕೇಳೋದು ತಪ್ಪಾ ನಮ್ಮಿಂದ ತಾನೇ ದೇಶ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗ್ತಾ ಇದೆ ಎಂದು ಗ್ರಾಮೀಣಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ ಅವರು, ಬಜೆಟ್ ಮೇಲೆ ನಮಗೆ ನಿರೀಕ್ಷೆ ಇಲ್ಲಾ. ಮೋದಿಯವರ ಮಾಸ್ಟರ್ ಸ್ಟ್ರೋಕ್ ನಿಂದ ನಿರುದ್ಯೋಗ ತಾಂಡವವಾಡುತ್ತಿದೆ. ಮಧ್ಯಮ ವರ್ಗ ನಿರ್ನಾಮವಾಗಿದೆ.
ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡ್ತಾ ಇದ್ದಾರೆ ಕರ್ನಾಟಕ ಎರಡನೇ ಹೆಚ್ಚು ಐಟಿ ಕಂಪನಿ ಹೊಂದಿರುವ ರಾಜ್ಯ ನಾವು 100 ರೂಪಾಯಿ ಟ್ಯಾಕ್ಸ್ ಕಟ್ಟಿದ್ರೆ 12 ರೂಪಾಯಿ ಕೊಡ್ತಾರೆ. ಯುಪಿ ಅವರಿಗೆ 120, ಬಿಹಾರ 178 ರೂಪಾಯಿ ಹೋಗ್ತಾ ಇದೆ. ಇಡೀ ಭಾರತ ದೇಶವನ್ನು ನಾವು ಸಮರ್ಥವಾಗಿ ನಡೆಸಿಕೊಂಡು ಹೋಗ್ತಾ ಇದ್ದೇವೆ . ನಮ್ಮ ರಾಜ್ಯದಿಂದ ಲೇ ಅತೀ ಹೆಚ್ಚು ಉದ್ಯೋಗ ಸೃಷ್ಟಿ ಆಗ್ತಿರೋದು. ಅದಕ್ಕೆ ಯಾವುದೇ ನೆರವು ನೀಡೋದಿಲ್ಲ ಅಂದ್ರೆ ಹೇಗೆ..? ಬಜೆಟ್ ಮೇಲೆ ನನಗೆ ಯಾವುದೇ ನಿರೀಕ್ಷೆ ಇಲ್ಲಾ ಎಂದರು.