ಬೆಂಗಳೂರು:- ಬೆಂಗಳೂರಿನ ನಿವಾಸಿಗಳಿಗೆ ಪೊಲೀಸರಿಂದ ಗುಡ್ನ್ಯೂಸ್ ಸಿಕ್ಕಿದೆ. ಸಿಲಿಕಾನ್ ಸಿಟಿ ಜನರು ಮನೆಯಿಂದ 2-3 ದಿನ ಎಲ್ಲಿಗಾದರೂ ಹೋಗಬೇಕೆಂದರೆ ಭಯಪಡುತ್ತಿದ್ದಾರೆ. ಮನೆಗೆ ಲಾಕ್ ಮಾಡಿ ಹೋದರೂ ಹಣ, ಚಿನ್ನ, ಬೆಳ್ಳಿ ಕಳ್ಳತನ ಆಗುತ್ತಿವೆ. ಸದ್ಯ ಇಂತಹ ಕೃತ್ಯಗಳನ್ನು ತಪ್ಪಿಸಲು ಪೊಲೀಸರು ಹೊಸ ಸಿಸ್ಟಮ್ ಪರಿಚಯಿಸಿದ್ದಾರೆ.
ಕಾರ್ಮಿಕರು ತೆರಳುತ್ತಿದ್ದ ವಾಹನ ಪಲ್ಟಿ: ತುಮಕೂರಿನಲ್ಲಿ ತಪ್ಪಿದ ದುರಂತ!
ಪೊಲೀಸರು ಮನೆ ಕಳ್ಳತನಗಳನ್ನು ತಪ್ಪಿಸಲು ಶತಸಿದ್ಧರಾಗಿ ನಿಂತಿದ್ದಾರೆ. ಲಾಕಡ್ ಹೌಸ್ ಚೆಕ್ಕಿಂಗ್ ಸಿಸ್ಟಮ್ ಮೂಲಕ ಮನೆಯ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿರುತ್ತಾರೆ. ಈ ರೀತಿ ಪೊಲೀಸರು ಹದ್ದಿನ ಕಣ್ಣಿಟ್ಟಿರಬೇಕು
ಸಿಲಿಕಾನ್ ಸಿಟಿಯವರು ಮನೆಯಿಂದ ಎರಡ್ಮೂರು ದಿನ ಅಥವಾ 1 ವಾರ ಹೊರಗೆ ಹೋಗುವಾಗ ಪೊಲೀಸರಿಗೆ ಮಾಹಿತಿ ನೀಡಬೇಕು. ಮನೆಯಿಂದ ಹೊರ ಹೋಗುವ ಮೊದಲು 080 22943111 ನಂಬರ್ಗೆ ಕರೆ ಮಾಡಬೇಕು. ಇದು ಬೇಡ ಎಂದರೆ 94808 01500 ಈ ನಂಬರ್ಗೆ ಕರೆ ಮಾಡಿ ನಿಮ್ಮ ಮನೆಯ ಪೊಟೋ, ವಿಳಾಸ ಹಾಗೇ ನಂಬರ್ ದಾಖಲು ಮಾಡಬೇಕು.