ನವದೆಹಲಿ:- ಸಂಸತ್ತಿನ ಬಜೆಟ್ ಅಧಿವೇಶನವು ಶುಕ್ರವಾರ ಆರಂಭವಾಗಲಿದ್ದು, ಫೆಬ್ರವರಿ 1ರಂದು ಶನಿವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಮಂದಗತಿಯ ಆರ್ಥಿಕ ಪ್ರಗತಿ, ಬೆಲೆ ಏರಿಕೆ, ವಕ್ಫ್ ತಿದ್ದುಪಡಿ ವಿಧೇಯಕ, ಕುಂಭಮೇಳ ಕಾಲ್ತುಳಿತ ಸೇರಿದಂತೆ ಹಲವು ವಿಚಾರಗಳಲ್ಲಿ ಸರಕಾರದ ಮೇಲೆ ಸವಾರಿಗೆ ಪ್ರತಿಪಕ್ಷಗಳು ಸಜ್ಜಾಗಿದೆ.
2024-25 ರ ಆರ್ಥಿಕ ಸಮೀಕ್ಷೆಯ ಪ್ರಕಾರ 2025-26 ಹಣಕಾಸು ವರ್ಷದಲ್ಲಿ ಭಾರತದ GDP ಬೆಳವಣಿಗೆಯು 6.3% ಮತ್ತು 6.8% ರ ನಡುವೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮುಂಬರುವ ವರ್ಷದಲ್ಲಿ ಆರ್ಥಿಕ ಬೆಳವಣಿಗೆ ನಿಧಾನವಾಗಬಹುದು ಎಂದು ಪ್ರೊಜೆಕ್ಷನ್ ಸೂಚಿಸಿದೆ. ಇದನ್ನೆಲ್ಲಾ ಬ್ಯಾಲೆನ್ಸ್ ಮಾಡುವಂತ ಇಂದು(ಫೆಬ್ರವರಿ 01) ಬಜೆಟ್ ಮಂಡಿಸಲು ಸಜ್ಜಾಗಿದ್ದು, ಮೋದಿ ಸರ್ಕಾರದ ಲೆಕ್ಕಕ್ಕೆ ಕೌಂಟ್ಡೌನ್ ಶುರುವಾಗಿದೆ. ಬಜೆಟ್ ನಿರೀಕ್ಷೆಗಳು
ಜನಸಮಾನ್ಯರು, ವೇತನದಾರರು, ಸ್ತ್ರೀ ಸಮುದಾಯ, ದೇಶದ ಮಧ್ಯಮವರ್ಗ ಉಸಿರು ಬಿಗಿ ಹಿಡಿದು ಕಾಯುತ್ತಿರೋ ಬಜೆಟ್ಗೆ ಕೌಂಟ್ಡೌನ್ ಶುರುವಾಗಿದೆ. ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣಪ್ರಮಾಣಧ ಬಜೆಟ್ಗೆ ಕ್ಷಣಗಣನೆ ಶುರುವಾಗಿದೆ. ಬಡ ಮತ್ತು ಮಧ್ಯಮವರ್ಗ ರೈತರು, ವ್ಯಾಪಾರಿಗಳಿಗೆ, ವೇತನದಾರರಿಗೆ ಮೋದಿ ಭರ್ಜರಿ ಗಿಫ್ಟ್ ಕೊಡುತ್ತಾರೆಂಬ ನಿರೀಕ್ಷೆ ಇದೆ. ಈ ಸುಳಿವು ನೀಡಿರುವ ಮೋದಿ, ಐತಿಹಾಸಿಕ ಬಜೆಟ್ ಮಂಡಿಸುತ್ತೇವೆ ಎಂದಿದ್ದಾರೆ. ಹೀಗಾಗಿ ಜನಸಾಮಾನ್ಯರಿಗೆ ಈ ಬಜೆಟ್ನಲ್ಲಿ ಬಂಪರ್ ಸಿಗುತ್ತಾ ಎಂದು ಕಾದುಕುಳಿತಿದ್ದಾರೆ.
ಇಂದಿನ ಬಜೆಟ್ ಅನ್ನ ವೇತನದಾರರ ವರ್ಗ ಉಸಿರು ಬಿಗಿ ಹಿಡಿದು ನೋಡ್ತಿದೆ. ಯಾಕಂದ್ರೆ, ತೆರಿಗೆ ವಿನಾಯಿತಿ ಮಿತಿ ಹೆಚ್ಚಾಗಬಹುದಂಬ ನಿರೀಕ್ಷೆ ಇದೆ. 80C ಅಡಿಯಲ್ಲಿ ಇರುವ ತೆರಿಗೆ ವಿನಾಯಿತಿಯನ್ನ ಒಂದೂವರೆ ಲಕ್ಷದಿಂದ ಎರಡು ಲಕ್ಷಕ್ಕೆ ಏರಿಸುವ ಸಾಧ್ಯತೆ ಇದೆ. ಹಾಗೆಯೇ ಸದ್ಯ 15ಲಕ್ಷಕ್ಕಿಂತ ಹೆಚ್ಚು ವೇತನ ಪಡೆಯುವವರು 30ರಷ್ಟು ಆದಾಯ ಪಾವತಿಸುತ್ತಿದ್ದಾರೆ. ಈ ಮಿತಿಯನ್ನ 20ಲಕ್ಷಕ್ಕೆ ಏರಿಕೆ ಮಾಡಿ, 15ರಿಂದ 20ಲಕ್ಷಕ್ಕೆ ಮತ್ತೊಂದು ಸ್ಲ್ಯಾಬ್ ನೀಡಬಹುದು ಎನ್ನಲಾಗುತ್ತಿದೆ.
ಮಿತಿಯನ್ನ 20ಲಕ್ಷಕ್ಕೆ ಏರಿಕೆ ಮಾಡಿ, 15ರಿಂದ 20ಲಕ್ಷಕ್ಕೆ ಮತ್ತೊಂದು ಸ್ಲ್ಯಾಬ್ ನೀಡಬಹುದು ಎನ್ನಲಾಗುತ್ತಿದೆ. ಇನ್ನೂ ಹೊಸ ತೆರಿಗೆ ಪದ್ಧತಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ 75 ಸಾವಿರ ಇದ್ದು, ಇದನ್ನ 1ಲಕ್ಷಕ್ಕೆ ಏರಿಕೆ ಮಾಡುವ ನಿರೀಕ್ಷೆ ಇದೆ. ಹಾಗೆಯೇ ಸದ್ಯ 7ಲಕ್ಷ ದಾಟಿದ್ರೆ 3ಲಕ್ಷದಿಂದಲೂ ತೆರಿಗೆ ಪಾವತಿಸುವ ಪದ್ಧತಿಯಿದೆ. ಈ ಮೀತಿಯನ್ನ 5ಲಕ್ಷಕ್ಕೆ ಹೆಚ್ಚಿಸಬಹುದು. ಈ ಮೂಲಕ ಹಳೇ ತೆರಿಗೆ ಪದ್ಧತಿಗೆ ನಿಧಾನವಾಗಿ ತಿಲಾಂಜಲಿ ಹಾಡಿ ಹೊಸ ತೆರಿಗೆ ಪದ್ಧತಿಗೆ ಉತ್ತೇಜನ ನೀಡಲು 7ಲಕ್ಷದವರೆಗೂ ಇರೋ ತೆರಿಗೆ ವಿನಾಯಿತಿಯನ್ನ 10ಲಕ್ಷಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ.
ಬಜೆಟ್ ಮೇಲೆ ಕರ್ನಾಟಕವೂ ಬಹಳ ನಿರೀಕ್ಷೆ ಇಟ್ಟುಕೊಂಡಿದೆ. ರಾಜ್ಯಕ್ಕೆ ಬರಬೇಕಾದ ಅನುದಾನ, ವಿವಿಧ ಯೋಜನೆಗಳಡಿ ಕೇಂದ್ರ ಸರ್ಕಾರ ಉಳಿಸಿಕೊಂಡಿರುವ ಬಾಕಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವಧನ, ರೈಲ್ವೆ ಯೋಜನೆಗಳು, ಮಹದಾಯಿ ಯೋಜನೆಗೆ ಅನುಮತಿ, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕೆಂಬ ಬೇಡಿಕೆ ಇದೆ. ಇದೆಲ್ಲಾ ಇಂದಿನ ಬಜೆಟ್ನಲ್ಲಿ ಈಡೇರುತ್ತಾ ಎನ್ನುವುದನ್ನ ಕಾದು ನೋಡಬೇಕಿದೆ.