ಕೊಡಗು : ರಾಜ್ಯದ ಬೇಡಿಕೆಗಳ ಬಗ್ಗೆ ಕೇಂದ್ರ ಕಿವುಡಾಗಿದೆ. ನಾಳಿನ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆ ರಾಜ್ಯ ಇರಿಸಿಲ್ಲ. ನಮ್ಮ ರಾಜ್ಯಕ್ಕೆ ನ್ಯಾಯಯುತವಾಗಿ ಸಿಕ್ಕಬೇಕಾದ ತೆರಿಗೆ ಪಾಲನ್ನೇ ಇನ್ನೂ ನೀಡದೆ ಕೇಂದ್ರ ವಂಚಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಭಾಗಮಂಡಲಕ್ಕೆ ಮೇಲ್ ಸೇತುವೆ ಉದ್ಘಾಟನೆ ಆಗಮಿಸಿದ ವೇಳೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವ್ರು, ಕಾವೇರಿ ನದಿ ಸ್ವಚ್ಛತೆ ಬಗ್ಗೆ ರಚಿಸಲಾದ ಸಮಿತಿ ಇನ್ನೂ ವರದಿ ನೀಡಿಲ್ಲ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
Budget session: ಎಂಎಸ್ಎಂಇಗಳಿಗೆ ಸರ್ಕಾರ ಸಾಲ ಖಾತರಿ ಯೋಜನೆಯನ್ನು ತರುತ್ತಿದೆ: ದ್ರೌಪದಿ ಮುರ್ಮು
2017 ರಲ್ಲಿ ಭಾಗಮಂಡಲದಲ್ಲಿ ಮೇಲ್ ಸೇತುವೆ ಕಾಮಗಾರಿ ಆರಂಭಸಲು ನಾನೇ ಮಂಜೂರಾತಿಯನ್ನು ನೀಡಿದ್ದೆ. ತದನಂತರ ಬಂದ ಸರ್ಕಾರ ಇದನ್ನು ಪೂರ್ಣಗೊಳಿಸಿಲ್ಲ. ಈಗ ನಮ್ಮ ಸರಕಾರದಿಂದ ಕೊಡಗಿನಲ್ಲಿ ಮಹತ್ವದ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ ಎಂದರು. ಸಿ ಮತ್ತು ಡಿ ಭೂಮಿ ಮೀಸಲು ಅರಣ್ಯ ಆಗಿ ಪರಿವರ್ತನೆ ಮಾಡಲು ಸಮಿತಿ ರಚಿಸಿ ವರದಿ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದರು. ವನ್ಯ ಜೀವಿ ಮಾನವ ಸಂಘರ್ಷ ರಾಜ್ಯವ್ಯಾಪಿ ಸಾಮಾನ್ಯ ಆಗಿದೆ. ಆನೆ, ಚಿರತೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಆಹಾರ ನೀರು ಅರಸಿ ನಾಡಿಗೆ ಬರುತ್ತಿದೆ. ಮಾನವ ಪ್ರಾಣಿ ಸಂಘರ್ಷ ತಪ್ಪಿಸಲು ಸೂಕ್ತ ಕ್ರಮ ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುತ್ತದೆ ಎಂದರು.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ತ್ರಿವೇಣಿ ಸಂಗಮ ಹಾಗೂ ಭಗಂಡೇಶ್ವರ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.ಈ ವೇಳೆ ಸಚಿವ ಬೊಸರಾಜ್. ಶಾಸಕರಾದ ಎ. ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಮುಖಂಡರಾದ, ಚಂದ್ರಮೌಳಿ, ಕೆಪಿಸಿಸಿ ಸದಸ್ಯ ಕೆ.ಬಿ ಶಾಂತಪ್ಪ ಸೇರಿದಂತೆ ಕಾಂಗ್ರೆಸ್ ಪ್ರಮುಖರು ಇದ್ದರು.