ಬೆಂಗಳೂರು: ಬಿಜೆಪಿಯ ಮನೆ ಸದ್ಯ ಊರು ಬಾಗಿಲಾಗಿದೆ.ರಾಜ್ಯಾಧ್ಯಕ್ಷ ಹಠವೋ ಎಂದು ವಿಜಯೇಂದ್ರ ವಿರುದ್ಧ ಒಬ್ಬೊಬ್ಬರೇ ಬಿಜೆಪಿ ಕಲಿಗಳು ತಿರುಗಿ ಬಿದ್ದಿದ್ದಾರೆ.ಇವತ್ತು ಕೂಡ ವಿಜಯೇಂದ್ರ ವಿರುದ್ಧ ಬಿಜೆಪಿ ನಿಷ್ಠಾವಂತ ಟೀಂ ಸಭೆ ಸೇರಿ,ವಿಜಯೇಂದ್ರ ವಿರುದ್ಧ ಗುಡುಗಿದ್ರು.ಅತ್ತ ಕಾಂಗ್ರೆಸ್ ದಲಿತ ಸಚಿವರು ಸದ್ದಿಲ್ದದೇ ಮೀಟಂಗ್ ನಡೆಸಿದ್ದಾರೆ. ಇದೊಂದು ಯುದ್ಧ, ಮಾಡು ಇಲ್ಲವೆ ಮಡಿ, ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ.. ಹೀಗೇ ಡೈಲಾಗ್ ಮೂಲಕವೇ ಮಾತು ಮುಗಿಸಿದ್ರು ಉತ್ತರದ ಹುಲಿ ಬಸವನಗೌಡ ಪಾಟೀಲ್ ಯತ್ನಾಳ್
ಹೌದು.. ಯುದ್ಧಕ್ಕೆ ಅಡಿಯಿಟ್ಟಾಗಿದೆ ಹಿಂದೆ ಸರಿಯೋ ಮಾತೇ ಇಲ್ಲ ಎಂದು ಮತ್ತೆ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.. ಸದಾಶಿವನಗರದ ಕುಮಾರ ಬಂಗಾರಪ್ಪ ನಿವಾಸದಲ್ಲಿ ಇಂದು ಮತ್ತೆ ಸಭೆ ನಡೆಸಿದ್ರು.. ಈ ವೇಳೆ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ಸುದೀರ್ಘ ಪತ್ರವನ್ನು ಬರೆಯಲಾಗಿದೆ..
ನಿಮ್ಮ ಮೂಳೆಗಳು ಸ್ಟ್ರಾಂಗ್ ಆಗ್ಬೇಕಾ..? ಹಾಗಾದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ಅದು ಪಕ್ಷದ ಚೌಕಟ್ಟಿನಲ್ಲಿ ಪತ್ರ ಬರೆಯಲಾಗಿದೆ.. ಜಿಲ್ಲಾಧ್ಯಕ್ಷರ ನೇಮಕಾತಿ ಪ್ರಕ್ರಿಯೆ ವ್ಯವಸ್ಥಿತ ರೀತಿಯಲ್ಲಿ ಮಾಡಿಲ್ಲ. ರಾಜ್ಯಾಧ್ಯಕ್ಷ ಆಗುವ ಉದ್ದೇಶದಿಂದ ಮಾಡಲಾಗಿದೆ. ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಏಕಪಕ್ಷೀಯವಾಗಿ ಬೇಕಾಬಿಟ್ಟಿ ಮಾಡಲಾಗಿದೆ ಎಂದು ಆರೋಪಿಸಿದರು.
ರಾಜ್ಯಾಧ್ಯಕ್ಷ ಚುನಾವಣೆ ಬಂದರೆ ಅಭ್ಯರ್ಥಿ ಆಯ್ಕೆ ಕುರಿತು ಇನ್ನೆರೆಡು ದಿನ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ.. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ಸಭೆ ನಡೆಸುತ್ತೇವೆ. ಜಿಲ್ಲಾಧ್ಯಕ್ಷರ ನೇಮಕಾತಿ ಪಾರದರ್ಶಕವಾಗಿಲ್ಲ. ಅಪಮಾನ, ಅವಮಾನ ಮಾಡುವ ರೀತಿಯಲ್ಲಿ ಜಿಲ್ಲಾಧ್ಯಕ್ಷರ ಆಯ್ಕೆ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಕುಮಾರ್ ಬಮಗಾರಪ್ಪ..
ನಮ್ಮ ಜೊತೆ ತಟಸ್ಥರು ಸಹ ಇದ್ದಾರೆ ಎಂದು ಹೇಳುವ ಮೂಲಕ ಆರ್ ಅಶೋಕ್ ಮತ್ತು ಬೊಮ್ಮಯಿ ನಮ್ಮ ಕಡೆ ಎಂಬುದನ್ನ ಪರೋಕ್ಷವಾಗಿ ಹೇಳಿದ್ರು.. ಒಟ್ಟಾರೆ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಅಸಮಧಾನ ಕಿಚ್ಚು ಹೆಚ್ಚಾಗುತ್ತಿದೆ.ಪ್ರತಿಪಕ್ಷ ಬಿಜೆಪಿಯಲ್ಲಿ ವಿಜಯೇಂದ್ರ ಹಠಾವೋ ಎಂದು ನಿಷ್ಠಾವಂತ ಬಿಜೆಪಿ ನಾಯಕರು ತೊಡೆ ತಟ್ಟಿದ್ದಾರೆ.ಇತ್ತ ಕಾಂಗ್ರೆಸ್ ನಲ್ಲಿ ಪವರ್ ಶೇರಿಂಗ್ ವಿಚಾರದಲ್ಲಿ ಕ್ಲೋಸ್ ಡೋರ್ ಮೀಟಿಂಗ್ ಗಳು ಸದ್ದು ಮಾಡ್ತಿದೆ.