ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟಕ್ಕೆ ಮಾದಪ್ಪನ ದರ್ಶನಕ್ಕೆ ತೆರಳುತ್ತಿದ್ದ ಮಾದಪ್ಪನ ಭಕ್ತರಿಗೆ ಮಾರ್ಗಮದ್ಯೆ ದಿಢೀರನೆ ಕಾಡಾನೆಯೊಂದು ರಸ್ತೆಗೆ ಅಡ್ಡಲಾಗಿ ನಿಂತು ಮಾದಫ್ನ ಭಕ್ತರು ಭಯಭೀತರಾಗಿ ಓಡಿದಂತಹ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೋಣನಕೆರೆ ತಾಳುಬೆಟ್ಟ ನಡುವೆ ರಸ್ತೆಯಲ್ಲಿಯೇ ದಿಡೀರನೇ ಕಾಡಾನೆಯೊಂದು ಕಾಡಿನಿಂದ ಹೊರಬಂದು ರಸ್ತೆಯಲ್ಲಿ ಪ್ರತ್ಯಕ್ಷವಾಗಿದೆ.
ರೈಲಿಗೆ ಸಿಲುಕಿ 17 ಕುರಿಗಳು ಸಾವು: ಮುಗಿಲು ಮುಟ್ಟಿದ ಮಹಿಳೆ ಆಕ್ರಂದನ!
ಈ ವೇಳೆ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಬೈಕು ಹಾಗೂ ಕಾರಿನಲ್ಲಿ ತೆರಳುತ್ತಿದ್ದ ಭಕ್ತರು ಚೆಲ್ಲಾಪಿಲ್ಲಿಯಾಗಿ ಪೇರಿ ಕಿತ್ತ ಘಟನೆ ನಡೆದಿದೆ. ಮಲೆಮಹದೇಶ್ವರಬೆಟ್ಟಕ್ಕೆ ತೆರಳುವ ಭಕ್ತರಿಗೆ ಕಳೆದ ಹದಿನೈದು ದಿನಗಳಿಂದಲೂ ಕೂಡ ಕಾಡಿನಿಂದ ಹೊರಬರುತ್ತಿರುವ ಕಾಡಾನೆಗಳು ಮಾದಪ್ಪನ ಭಕ್ತರಿಗೆ ಉಪಟಳ ನೀಡುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರವಹಿಸಿ ಕಾಡಿನಿಂದ ನಾಡಿಗೆ ಕಾಡಾನೆಗಳು ಬರದಂತೆ ಗಸ್ತು ನಡೆಬೇಕೆಂದು ಮಾದಪ್ಪನ ಭಕ್ತರು ಒತ್ತಾಯಿಸಿದ್ದಾರೆ.