ಒಂಟಿ ಮಹಿಳೆ ನಡೆದುಕೊಂಡು ಹೋಗುವಾಗ ಚಿನ್ನದ ಸರ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಯನ್ನ ಹೆಬ್ಬಗೋಡಿ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಹೆಗ್ಗನಹಳ್ಳಿ ಮೂಲದ ಗಗನ ಚಂದ್ರ ಬಂಧಿತ ಅರೋಪಿ ಬಂದಿತ ಆರೋಪಿಯಿಂದ 50 ಗ್ರಾಂ ಚಿನ್ನದ ಒಡವೆಯನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ರಂಗಮ್ಮ ಎಂಬಾಕೆ ಇದೇ ತಿಂಗಳ 17ನೇ ತಾರೀಖಿನಂದು ಬೆಂಗಳೂರು ಹೊಸೂರು ಮುಖ್ಯ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಹೆಬ್ಬಗೋಡಿ ಅಂಡರ್ ಪಾಸ್ ನಲ್ಲಿ ನಡೆದುಕೊಂಡು ಹೋಗುವಾಗ ಅಪರಿಚಿತ ವ್ಯಕ್ತಿಯೊಬ್ಬ ಸರವನ್ನು ಕಿತ್ತು ಎಸ್ಕೇಪ್ ಆಗಿದ್ದ ಬಳಿಕ ಒಡವೆ ಕಳೆದುಕೊಂಡಿದ್ದ ರಂಗಮ್ಮ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿ ಚಿನ್ನದ ಸರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ..