.ಶುದ್ಧ ಗಾಳಿ ಹಾಗೂ ಪರಿಸರ ಸಂರಕ್ಷಣೆಗಾಗಿ ಮಹದೇವಪುರದ ವರ್ತೂರ್ ಕೆರೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮೂರು ಸಾವಿರ ಗಿಡ ನೆಡುವ ಕಾರ್ಯಕ್ಕೆ ಶಾಸಕಿ ಮಂಜುಳಾ ಲಿಂಬಾವಳಿ ಚಾಲನೆ ನೀಡಿದರು..
ನಗರ ಬೆಳದಂತೆ ಗಿಡ-ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನ ಮನಗೊಂಡ ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಶುದ್ಧ ಗಾಳಿ ಮತ್ತು ಉತ್ತಮ ಪರಿಸರಕ್ಕಾಗಿ ಮೂರು ಸಾವಿರ ಗಿಡಗಳನ್ನು ನೆಡಲಾಯಿತು..
Job Search: ಹೈಕೋರ್ಟ್ʼನಲ್ಲಿ ಭರ್ಜರಿ ಉದ್ಯೋಗಾವಕಾಶ..! ಆಸಕ್ತರು ಇವತ್ತೇ ಅಪ್ಲೈ ಮಾಡಿ
ಬಳಿಕ ಮಾತನಾಡಿದ ಶಾಸಕಿ ಮಂಜುಳಾ ಲಿಂಬಾವಳಿ ಅವರು ಕ್ಷೇತ್ರದ ವರ್ತೂರು ಕೆರೆಯಲ್ಲಿ ‘ಸೇ ಟ್ರೀಸ್’ ಸೇರಿದಂತೆ ವಿವಿಧ ಎನ್ಜಿಓಗಳ ವತಿಯಿಂದ ಗಿಡ ನೆಡಲು ಮೀಸಲಿರುವ ಜಾಗದಲ್ಲಿ 3,000 ಗಿಡ ನೆಡಲಾಗಿದ್ದು, ನಗರದಲ್ಲಿ ಜನಸಂಖ್ಯೆ, ವಾಹನಗಳ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಿಸಬೇಕಿದ್ದು,
ಪರಿಸರ ಮುಖಿ ಕಾರ್ಯಗಳು ಹೆಚ್ಚಾಗಬೇಕು, ಗಿಡಗಳನ್ನು ಬೆಳಸಿ ಸಂರಕ್ಷಿಸುವ ಕಾರ್ಯವಾಗಬೇಕು ಎಂದರು… ಈ ವೇಳೆ ಬಿಡಿಎ, ಬಿಬಿಎಂಪಿ ಅಧಿಕಾರಿಗಳು, ನೂರಾರು ಪರಿಸರ ಪ್ರೇಮಿಗಳು ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು..