‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೌತಮಿ ಜಾಧವ್ ಹಾಗೂ ಉಗ್ರಂ ಮಂಜು ಗೆಳೆತನ ಸದ್ದು ಮಾಡಿತ್ತು. ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕವೂ ಗೌತಮಿ ಹಾಗೂ ಮಂಜು ಗೆಳೆತನ ಮುಂದುವರಿಸಿದ್ದಾರೆ. ಈ ಸಂದರ್ಭದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ಗೌತಮಿ, ಮಂಜು ಹಾಗೂ ಮೋಕ್ಷಿತಾ ಮಧ್ಯೆ ಒಳ್ಳೆಯ ಗೆಳೆತನ ಬೆಳೆಯಿತು. ದಿನ ಕಳೆದಂತೆ ಮಂಜು ಹಾಗೂ ಗೌತಮಿ ಜೊತೆಗೆ ವೈಮನಸ್ಸು ಬೆಳೆದು ಮೋಕ್ಷಿತಾ ಈ ಗುಂಪಿನಿಂದ ಹೊರ ನಡೆದರು. ಆ ಬಳಿಕ ಗೌತಮಿ ಹಾಗೂ ಮಂಜು ಒಟ್ಟಾಗಿ ಇದ್ದರು. ಬರು ಬರುತ್ತಾ ಮಂಜುವಿನ ನಡೆ ಗೌತಮಿಗೆ ಇಷ್ಟ ಆಗದೆ ಹಲವು ಭಾರಿ ಇಬ್ಬರು ಕಿತ್ತಾಡಿಕೊಂಡಿದ್ದರು.
ಹಲವರು ಮಂಜು ಹಾಗೂ ಗೌತಮಿ ಗೆಳೆತನದ ಬಗ್ಗೆ ಆಡಿಕೊಂಡಿದ್ದರು. ಗೌತಮಿ ಹಾಗೂ ಅವರ ಪತಿ ಅಭಿಷೇಕ್ ಮಧ್ಯೆ ಮಂಜು ಪ್ರವೇಶ ಎಂದೆಲ್ಲ ಟ್ರೋಲ್ ಮಾಡಿದ್ದರು. ‘ಆಂಟಿ–ಅಂಕಲ್ ಲವ್ಸ್ಟೋರಿ’ ಎಂದೆಲ್ಲ ಹೀಯಾಳಿಸಿದ್ದರು. ಆದರೆ, ಈ ರೀತಿಯ ಟ್ರೋಲ್ಗಳಿಗೆ ಗೌತಮಿ ಅವರು ಒಂದೇ ಒಂದು ಫೋಟೋ ಮೂಲಕ ಉತ್ತರ ಕೊಟ್ಟಿದ್ದಾರೆ.
ಗೌತಮಿ ಜಾಧವ್, ಅವರ ಪತಿ ಅಭಿಷೇಕ್ ಹಾಗೂ ಮಂಜು ಒಂದೆಡೆ ಸೇರಿದ್ದಾರೆ. ಈ ಮೂವರು ಈವರೆಗೆ ಒಟ್ಟಾಗಿ ಯಾವುದೇ ಫೋಟೋ ತೆಗೆಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಮೂವರು ಒಟ್ಟಾಗಿ ಸೇರಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಮೂಲಕ ಇವರ ಮಧ್ಯೆ ಯಾವುದೇ ಮನಸ್ತಾಪ ಇಲ್ಲ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ.