ವಿದ್ಯಾರ್ಥಿನಿಗೆ ಕಂಟ್ರಿಮೇಡ್ ಪಿಸ್ತೂಲ್ ನಿಂದ ಗುಂಡುಹಾರಿಸಿ ಹತ್ಯೆಗೈದಿದ್ದ ಅಪರಾಧಿಗೆ ನಗರದ ಮ್ಯಾಜಿಸ್ಟ್ಟೇಟ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ತೀರ್ಪು ನೀಡಿದೆ. ಭಾರತೀಯ ನ್ಯಾಯ ಸಂಹಿತೆ (ಐಪಿಸಿ) ಕೊಲೆ-ಕೊಲೆಯತ್ನ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್ ನಡಿ ಬಂಧಿತನಾಗಿದ್ದ ಮಹೇಶ್ ಎಂಬಾತನಿಗೆ ನ್ಯಾ.ಗೀತಾ ಕೆ.ಬಿ. ಅವರು ಜೀವಾವಧಿ ಶಿಕ್ಷೆ ತೀರ್ಪು ನೀಡಿದ್ದಾರೆ. ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದೋಷಿ ಎಂದು ತೀರ್ಪು ನೀಡಿದ್ದು, ಅಪರಾಧಿಗೆ ಒಟ್ಟು 3.50 ಲಕ್ಷ ವಿಧಿಸಿದ್ದಾರೆ.
Swollen Feet: ಪದೇ ಪದೇ ಪಾದಗಳು ಊದಿಕೊಳ್ಳುತ್ತವೆಯೇ..? ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದುಗಳು
ದಂಡ ಪಾವತಿಸಲು ವಿಫಲರಾದರೆ ಕಠಿಣ ಕಾರಾಗೃಹ ಶಿಕ್ಷೆ, ದಂಡ ಮೊತ್ತದ ಹತ್ಯೆಗೊಳಗಾದ ವಿದ್ಯಾರ್ಥಿನಿ ಗೌತಮಿ ಕುಟುಂಬಕ್ಕೆ 2 ಲಕ್ಷ ಹಾಗೂ ಗುಂಡೇಟು ತಿಂದಿದ್ದ ಶಿರೀಷಾಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ 2 ಲಕ್ಷ ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿ ಪಿಯು ಕಾಲೇಜಿನಲ್ಲಿ ಅಪರಾಧಿ ಮಹೇಶ್ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ.
ಕಾಲೇಜು ಆವರಣದಲ್ಲಿರುವ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿಯೂ ಭದ್ರತಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ. ಈ ಹಾಸ್ಟೆಲ್ ನಲ್ಲಿ ಗುಂಡೇಟು ತಿಂದಿದ್ದ ದ್ವೀತಿಯ ಪಿಯು ವ್ಯಾಸಂಗ ಮಾಡುತ್ತಿದ್ದ ಗೌತಮಿ ಹಾಗೂ ಪ್ರಥಮ ಪಿಯು ಓದುತ್ತಿದ್ದ ಶಿರೀಷಾ ವಾಸ್ತವ್ಯ ಹೂಡಿದ್ದರು. 2015 ಮಾರ್ಚ್ 31ರ ರಾತ್ರಿ 10 ಗಂಟೆ ಸುಮಾರಿಗೆ ಹಾಸ್ಟೆಲ್ ಯ ವಿದ್ಯಾರ್ಥಿನಿಯರ ಕೊಠಡಿಗೆ ನುಗ್ಗಿದ ಮಹೇಶ್ ಪಿಸ್ತೂಲ್ ನಿಂದ ಗೌತಮಿ ತಲೆಗೆ ಹಾಗೂ ಶಿರಿಷಾ ಮುಖದ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ.
ದುರ್ಘಟನೆಯಲ್ಲಿ ಗೌತಮಿ ಸಾವನ್ನಪ್ಪಿದರೆ ಶಿರಿಷಾ ಗಂಭೀರವಾಗಿ ಗಾಯಗೊಂಡಿದ್ದಳು. ಕೊಲೆ-ಕೊಲೆಯತ್ನ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್ ನಡಿ ಪ್ರಕರಣ ದಾಖಲಿಸಿಕೊಂಡಿದ್ದಅಂದಿನ ಕಾಡುಗೋಡಿ ಠಾಣೆಯ ಇನ್ ಸ್ಪೆಕ್ಟರ್ ಎಂ.ಎಂ.ಪ್ರಶಾಂತ್ (ಪ್ರಸ್ತುತ ಸಿಐಡಿ ಸೈಬರ್ ವಿಭಾಗದ ಡಿವೈಎಸ್ಪಿ) ಅವರು ಆರೋಪಿಯನ್ನ 24 ಗಂಟೆಯೊಳಗೆ ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಹತ್ಯೆಗೆ ಕಾರಣವೇನು ?
ಹಾಸ್ಟೆಲ್ ನಲ್ಲಿ ರಾತ್ರಿ ಕಾವಲುಗಾರನಾಗಿ ಕೆಲಸ ಮಾಡುವಾಗ ಅಕ್ರಮವಾಗಿ ವಿದ್ಯಾರ್ಥಿಯರ ವಸತಿನಿಲಯ ಮುಂದೆ ಓಡಾಡುತ್ತಿದ್ದ. ಇದಕ್ಕೆ ಗೌತಮಿ ಆಕ್ಷೇಪಿಸಿ ಬೈದು ವಾಪಸ್ ಕಳುಹಿಸಿದ್ದರು. ಅಲ್ಲದೆ ಕೃತ್ಯವೆಸಗುವ ಒಂದು ತಿಂಗಳ ಹಿಂದೆ ಸಿಇಟಿ ಪರೀಕ್ಷೆಗಾಗಿ ಕಾಲೇಜು ಆವರಣದಲ್ಲಿ ಅರ್ಜಿ ಭರ್ತಿ ಮಾಡುವಾಗ ಅಪರಾಧಿಯು ನಾನು ಅರ್ಜಿ ಭರ್ತಿ ಮಾಡಿಕೊಡಲೇ ಎಂದು ಕೇಳಿದ್ದ. ಇದಕ್ಕೆ ಮೃತ ಗೌತಮಿಯು ನೀನು ಕಾಲೇಜು ಅಟೆಂಡರ್ ಆಗಿದ್ದು, ನೀನೇನು ಅರ್ಜಿ ಭರ್ತಿ ಮಾಡಿಕೊಡುತ್ತೀಯಾ ? ನಿನ್ನ ಕೆಲಸ ನೋಡು ಎಂದು ಹೇಳಿದ್ದಳು. ಎರಡು ಬಾರಿ ತಮ್ಮನ್ನ ಹೀಯಾಳಿಸಿದ್ದರಿಂದ ಸಂಚು ರೂಪಿಸಿ ತನ್ನ ಬಳಿಯಿದ್ದ ಪಿಸ್ತೂಲ್ ನಿಂದ ಶೂಟ್ ಮಾಡಿ ಹತ್ಯೆ ಮಾಡಿರುವುದು ವಿಚಾರಣೆಯಲ್ಲಿ ತಿಳಿದುಬಂದಿತ್ತು. ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರದಲ್ಲಿ ಪಿಸ್ತೂಲ್ ಖರೀದಿಸಿದ್ದ
ದ್ವಿತೀಯ ಪಿಯುಸಿವರೆಗೂ ವ್ಯಾಸಂಗ ಮಾಡಿದ್ದ ಮಹೇಶ್, ಪುಸ್ತಕ ಹಾಗೂ ಪತ್ರಿಕೆಗಳನ್ನ ಓದುವ ಪ್ರವೃತ್ತಿ ಬೆಳೆಸಿಕೊಂಡಿದ್ದ. ಖಾಸಗಿ ಆಂಗ್ಲ ಪತ್ರಿಕೆಯಲ್ಲಿ ದೆಹಲಿ ಪೊಲೀಸರು ಬಿಹಾರದಲ್ಲಿ ನಡೆಯುತ್ತಿದ್ದ ಅಕ್ರಮ ಪಿಸ್ತೂಲ್ ಮಾರಾಟ ಜಾಲದಲ್ಲಿ ತೊಡಗಿದ್ದ ಆರೋಪಿಗಳ ಬಂಧನ ಬಗ್ಗೆ ಸುದ್ದಿ ಓದಿ, ಪಿಸ್ತೂಲ್ ಖರೀದಿ ವ್ಯಾಮೋಹ ಬೆಳೆಸಿಕೊಂಡಿದ್ದ.
ಪಿಸ್ತೂಲ್ ಖರೀದಿಗಾಗಿಯೇ ಬೆಂಗಳೂರಿನಿಂದ ಬಿಹಾರದ ಮುನ್ಗರ್ ಎಂಬ ಪ್ರದೇಶಕ್ಕೆ ತೆರಳಿದ್ದ. ಅಕ್ರಮ ಪಿಸ್ತೂಲ್ ಮಾರಾಟಗಾರರನ್ನ ಸಂಪರ್ಕಿಸಿ 15 ಸಾವಿರ ರೂ.ಪಿಸ್ತೂಲ್ ಖರೀದಿಸಿ ನಗರಕ್ಕೆ ವಾಪಸ್ ಆಗಿದ್ದ. ಕಾಲೇಜಿನಲ್ಲಿ ವಿದ್ಯಾರ್ಥಿನಿಯು ಎರಡು ಬಾರಿ ಅವಮಾನ ಮಾಡಿರುವುದನ್ನ ಸಹಿಸದೆ ಸಂಚು ರೂಪಿಸಿ ಪಿಸ್ತೂಲ್ ನಿಂದ ಗುಂಡು ಹಾರಿಸಿ ಸಾಯಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಮೀನಾಕುಮಾರಿ ಎಸ್. ರಾಜವಂಶಿ ವಾದ ಮಂಡಿಸಿದ್ದರು.