ಆರ್ಬಿಐ ಕ್ಯಾಲಂಡರ್ ಪ್ರಕಾರ 2025ರ ಫೆಬ್ರವರಿ ತಿಂಗಳಲ್ಲಿ ಬ್ಯಾಂಕುಗಳಿಗೆ ಸಾಕಷ್ಟು ದಿನ ರಜೆ ಘೋಷಣೆ ಮಾಡಿದೆ. ದೇಶದ ವಿವಿಧೆಡೆ ಒಟ್ಟು 14 ದಿನಗಳವರೆಗೆ ಬ್ಯಾಂಕ್ಗಳಿಗೆ ರಜೆ ಇರುತ್ತದೆ. 28 ದಿನಗಳಿರುವ ಫೆಬ್ರುವರಿ ತಿಂಗಳಲ್ಲಿ ವಸಂತ ಪಂಚಮಿ, ತೈಪುಶಮ್, ರವಿದಾಸ್ ಜಯಂತಿ, ಲುಯ್ ನಗಾರ್ ನೀ, ಶಿವಾಜಿ ಜಯಂತಿ, ಮಹಾಶಿವರಾತ್ರಿ ಇತ್ಯಾದಿ ಹಬ್ಬಗಳಿವೆ. ಜೊತೆಗೆ ಆರು ಭಾನುವಾರ ಮತ್ತು ಶನಿವಾರದ ರಜೆಗಳೂ ಒಳಗೊಂಡಿವೆ.
ಕೆಲ ರಜೆಗಳು ಕೆಲ ಪ್ರದೇಶಗಳಿಗೆ ಸೀಮಿತವಾಗಿವೆ. ಮಿಝೋರಾಮ್ ರಾಜ್ಯೋತ್ಸವ ದಿನದಂದು ಆ ರಾಜ್ಯದಲ್ಲಿರುವ ಬ್ಯಾಂಕುಗಳಿಗೆ ಮಾತ್ರ ರಜೆ ಇರುತ್ತದೆ. ಮಹಾಶಿವರಾತ್ರಿಯಂದು ತಮಿಳುನಾಡು, ಬಿಹಾರ, ಈಶಾನ್ಯ ರಾಜ್ಯಗಳ ಇತ್ಯಾದಿ ಕೆಲ ರಾಜ್ಯಗಳನ್ನು ಹೊರತುಪಡಿಸಿ ಉಳಿದ ಕಡೆ ರಜೆ ಇರುತ್ತದೆ. ಫೆ, 11ರಂದು ಇರುವ ತೈಪುಶಮ್ ಹಬ್ಬ ತಮಿಳುನಾಡಿನ ವೈಶಿಷ್ಟ್ಯವಾಗಿದ್ದು ಅಲ್ಲಿ ಮಾತ್ರ ರಜೆ ಇರುತ್ತದೆ.
2025ರ ಫೆಬ್ರುವರಿ ತಿಂಗಳ ಬ್ಯಾಂಕ್ ರಜೆ ದಿನಗಳು
- ಫೆ. 2: ಭಾನುವಾರ
- ಫೆ. 3, ಸೋಮವಾರ: ವಸಂತ ಪಂಚಮಿ, ಸರಸ್ವತಿ ಪೂಜೆ (ಹರ್ಯಾಣ, ಒಡಿಶಾ, ಪಂಜಾಬ್, ಪಶ್ಚಿಮ ಬಂಗಾಳ, ತ್ರಿಪುರಾ ರಾಜ್ಯಗಳಲ್ಲಿ ರಜೆ)
- ಫೆ. 8: ಎರಡನೇ ಶನಿವಾರ
- ಫೆ. 9: ಭಾನುವಾರ
- ಫೆ. 11, ಮಂಗಳವಾರ: ತೈಪುಶಮ್ ಹಬ್ಬ (ತಮಿಳುನಾಡಿನಲ್ಲಿ ರಜೆ)
- ಫೆ. 12, ಬುಧವಾರ: ಸಂತ ರವಿದಾಸ್ ಜಯಂತಿ (ಹಿಮಾಚಲ ಪ್ರದೇಶ, ಹರ್ಯಾಣ, ಪಂಜಾಬ್, ಮಧ್ಯಪ್ರದೇಶ ರಾಜ್ಯಗಳಲ್ಲಿ ರಜೆ)
- ಫೆ. 15, ಶನಿವಾರ: ಲುಯ್ ನಾಗಾಯ್ ನೀ ಹಬ್ಬ (ಮಣಿಪುರ ರಾಜ್ಯದಲ್ಲಿ ರಜೆ)
- ಫೆ. 16: ಭಾನುವಾರ
- ಫೆ. 19, ಬುಧವಾರ: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ (ಮಹಾರಾಷ್ಟ್ರದಲ್ಲಿ ರಜೆ)
- ಫೆ. 20, ಗುರುವಾರ: ರಾಜ್ಯೋತ್ಸವ (ಮಿಝೋರಾಮ್, ಅರುಣಾಚಲ ಪ್ರದೇಶದಲ್ಲಿ ರಜೆ)
- ಫೆ. 22: ನಾಲ್ಕನೇ ಶನಿವಾರ
- ಫೆ. 23: ಭಾನುವಾರ
- ಫೆ. 26, ಬುಧವಾರ: ಮಹಾಶಿವರಾತ್ರಿ ಹಬ್ಬ (ಕರ್ನಾಟಕ ಸೇರಿ ಹೆಚ್ಚಿನ ಕಡೆ ರಜೆ)
- ಫೆ. 28, ಶುಕ್ರವಾರ: ಲೋಸರ್ ಹಬ್ಬ (ಸಿಕ್ಕಿಂ ರಾಜ್ಯದಲ್ಲಿ ರಜೆ)
ಫೆಬ್ರುವರಿಯಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳು
- ಫೆ. 2: ಭಾನುವಾರ
- ಫೆ. 8: ಎರಡನೇ ಶನಿವಾರ
- ಫೆ. 9: ಭಾನುವಾರ
- ಫೆ. 16: ಭಾನುವಾರ
- ಫೆ. 22: ನಾಲ್ಕನೇ ಶನಿವಾರ
- ಫೆ. 23: ಭಾನುವಾರ
- ಫೆ. 26, ಬುಧವಾರ: ಮಹಾಶಿವರಾತ್ರಿ ಹಬ್ಬ
ಬ್ಯಾಂಕುಗಳಿಗೆ ರಜೆ ಇದ್ದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ದಿನ 24 ಗಂಟೆಯೂ ಆನ್ಲೈನ್ನಲ್ಲಿ ಲಭ್ಯ ಇರುತ್ತವೆ. ಹಣ ವರ್ಗಾವಣೆ, ಹಣ ಪಾವತಿ ಇತ್ಯಾದಿ ಹಲವು ಕಾರ್ಯಗಳನ್ನು ನೆಟ್ಬ್ಯಾಂಕಿಂಗ್, ಯುಪಿಐ ಇತ್ಯಾದಿ ಮೂಲಕ ಮಾಡಬಹುದು. ಕ್ಯಾಷ್ ಪಡೆಯಲು ಎಟಿಎಂಗಳಿರುತ್ತವೆ. ಡಿಡಿ ಪಡೆಯುವುದು, ಆರ್ಟಿಜಿಎಸ್, ಅರ್ಜಿ ಸಲ್ಲಿಕೆ ಇತ್ಯಾದಿ ಕೆಲ ವಿಶೇಷ ಬ್ಯಾಂಕಿಂಗ್ ಕೆಲಸಗಳಿಗೆ ಬ್ಯಾಂಕ್ ಕಚೇರಿಗೆ ಹೋಗುವ ಅವಶ್ಯಕತೆ ಇರುತ್ತದೆ.