‘ಬಿಗ್ ಬಾಸ್ ಕನ್ನಡ ಸೀಸನ್ 11’ ಪೂರ್ಣಗೊಂಡಿದೆ. ಈ ಬಾರಿಯ ಸೀಸನ್ನಲ್ಲಿ 20 ಮಂದಿ ಬಂದು ಹೋಗಿದ್ದಾರೆ. ಸಿಂಗರ್ ಹನುಮಂತ ಲಮಾಣಿ ಅವರು ಬಿಗ್ ಬಾಸ್ ಟ್ರೋಫಿ ಗೆದ್ದು ಸಂಭ್ರಮಿಸಿದ್ದಾರೆ. ಅವರಿಗಿಂತಲೂ ಹೆಚ್ಚಾಗಿ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ.
ಇದೀಗ ಹುಟ್ಟೂರಾದ ಹಾವೇರಿಯಲ್ಲಿಯೂ ಹನುಮಂತ ಗೆದ್ದ ಸಂಭ್ರಮದಲ್ಲಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಹೀಗಿರುವಾಗ ಮಗ ಬಿಗ್ ಬಾಸ್ ಗೆದ್ದ ಖುಷಿಯನ್ನು ಹನುಮಂತ ತಂದೆ ಮೇಘಪ್ಪ ಹಂಚಿಕೊಂಡಿದ್ದಾರೆ. ಮಗನ ಮದುವೆಗೆ ಸುದೀಪ್ (Sudeep) ಸರ್ನ ಕರೆಯುತ್ತೇವೆ ಎಂದಿದ್ದಾರೆ.
Blood in Urine: ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕ್ಯಾನ್ಸರ್ ಲಕ್ಷಣವೇ..? ವೈದ್ಯರ ಸಲಹೆ ಏನೂ..?
ಹನುಮಂತನ ತಂದೆ ಮಾತನಾಡಿ, ಮಗನ ಸಾಧನೆ ನೋಡಿರೋದು ನಮಗೆ ದೊಡ್ಡ ಖುಷಿ. ನನ್ನ ಮಗ ಗೆಲ್ಲುತ್ತಾನೆ ಎಂದು ಅಂದುಕೊಂಡಿರಲಿಲ್ಲ. 5 ಕೋಟಿಗೂ ಅಧಿಕ ಮತ ಪಡೆದು ಗೆದ್ದಿರೋದು ಖುಷಿಯಿದೆ. ಇದು ಹನುಮಂತನ ಗೆಲುವು ಅಲ್ಲ. ಕರುನಾಡಿನ ಜನರ ಗೆಲುವು ಎಂದಿದ್ದಾರೆ.
ಈ ವೇಳೆ, ಹನುಮಂತನ ಮದುವೆ ಬಗ್ಗೆ ಮಾತನಾಡಿ ಮೊದಲು ಹುಡುಗಿಯನ್ನು ನೋಡೋಣ. ಆ ನಂತರ ಮಾತುಕತೆ ಮಾಡೋಣ ಎಂದಿದ್ದಾರೆ. ನಮ್ಮ ಮನೆ ಮುಂದೆ ಮದುವೆ ಮಾಡುತ್ತೇವೆ. ಆದರೆ ಎಲ್ಲೂ ಹುಡುಗಿ ಯಾರು ಎಂಬ ಮಾಹಿತಿ ಕೊಟ್ಟಿಲ್ಲ. ಇನ್ನೂ ಸುದೀಪ್ ಸರ್ನ ಬಹಳ ಹತ್ತಿರದಿಂದ ನೋಡಿ ಖುಷಿಯಾಯ್ತು. ಮಗನ ಮದುವೆಗೆ ಸುದೀಪ್ ಸರ್ನ ಹೇಳುತ್ತೇವೆ ಎಂದು ತಂದೆ ಮೇಘಪ್ಪ ಹೇಳಿದ್ದಾರೆ.