ಪರಿಸರವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡುವುದು ನಮ್ಮ ಕರ್ತವ್ಯ ಎಂಬುದನ್ನು ನಾವು ಮರೆತುಬಿಡುತ್ತೇವೆ ಏಕೆಂದರೆ ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಗರ, ಹಳ್ಳಿ ಅಥವಾ ಪಟ್ಟಣದ ಸ್ವಚ್ಛತೆಯು ನಮ್ಮ ಸ್ವಂತ ಮನೆಗಳ ಸ್ವಚ್ಛತೆಯಿಂದ ಪ್ರಾರಂಭವಾಗುತ್ತದೆ. ಹೀಗಾಗಿ ಪರಿಸರದಲ್ಲಿ ಸ್ವಚ್ಛತೆಯ ಮಹತ್ವವನ್ನು ಎತ್ತಿ ತೋರಿಸಲು ನಾವು ಜನವರಿ 30 ರಂದು ಭಾರತದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನವನ್ನು ಆಚರಿಸುತ್ತೇವೆ.
ಇತಿಹಾಸ ಮತ್ತು ಮಹತ್ವ:
2014 ರಿಂದ, ಪ್ರತಿ ವರ್ಷ ಜನವರಿ 30 ಅನ್ನು ಮಹಾತ್ಮ ಗಾಂಧೀಜಿಯವರ ಹುತಾತ್ಮರಾದ ದಿನದ ನೆನಪಿಗಾಗಿ ರಾಷ್ಟ್ರೀಯ ಸ್ವಚ್ಛತಾ ದಿನವಾಗಿ ಆಚರಿಸಲಾಗುತ್ತದೆ.
ಸ್ವಚ್ಛತೆಯ ಮಹತ್ವ:
ನಮ್ಮ ದೈನಂದಿನ ಬದುಕಿನಲ್ಲಿ ನೈರ್ಮಲ್ಯ ಮತ್ತು ಶುಚಿತ್ವ ಪ್ರಮುಖ ಪಾತ್ರ ವಹಿಸುತ್ತವೆ.ಇವು ಡೆಂಗ್ಯೂ, ಟೈಫಾಯಿಡ್, ಹೆಪಟೈಟಿಸ್ ಮತ್ತು ಸೊಳ್ಳೆ ಕಡಿತದಿಂದ ಉಂಟಾಗುವ ಇತರ ಕಾಯಿಲೆಗಳನ್ನು ತಡೆಯುವುದರಿಂದ ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ. ವಿಷಪೂರಿತ ಆಹಾರವನ್ನು ತಿನ್ನುವುದು, ಕಲುಷಿತ ನೀರು ಕುಡಿಯುವುದು ಅಥವಾ ಆರೋಗ್ಯಕರವಲ್ಲದ ವಾತಾವರಣದಲ್ಲಿ ವಾಸಿಸುವುದರಿಂದ ಕಾಮಾಲೆ, ಕಾಲರಾ, ಆಸ್ಕರಿಯಾಸಿಸ್, ಲೆಪ್ಟೊಸ್ಪಿರೋಸಿಸ್, ರಿಂಗ್ವರ್ಮ್, ಸ್ಕ್ಯಾಬೀಸ್, ಸ್ಕಿಸ್ಟೊಸೋಮಿಯಾಸಿಸ್, ಟ್ರಾಕೋಮಾ ಮುಂತಾದ ರೋಗಗಳು ಹರಡಬಹುದು. ಸ್ವಚ್ಛತೆ ಕಾಪಾಡದೇ ಹೋದರೆ ಕಸ ಮತ್ತು ಕೊಳಕು ಸಂಗ್ರಹವಾಗುತ್ತದೆ. ಕಸದಿಂದ ಉಂಟಾಗುವ ವಾಸನೆ ಕೂಡ ಸಹಿಸಲಸಾಧ್ಯ.
ನೈರ್ಮಲ್ಯಕ್ಕೆ ಸಂಬಂಧಿಸಿದ ಸಂಗತಿಗಳು:
ಅಸುರಕ್ಷಿತ ನೈರ್ಮಲ್ಯವು ಪ್ರತಿವರ್ಷ 775,000 ಸಾವಿಗೆ ಕಾರಣವಾಗಿದೆ
ಕಡಿಮೆ ಆದಾಯವುಳ್ಳ ದೇಶಗಳಲ್ಲಿ ಕಳಪೆ ನೈರ್ಮಲ್ಯವು 5% ಸಾವುಗಳಿಗೆ ಕಾರಣವಾಗಿದೆ.
2.4 ಬಿಲಿಯನ್ ಜನರಿಗೆ (ವಿಶ್ವದ ಮೂರನೇ ಒಂದು ಭಾಗದಷ್ಟು) ನೈರ್ಮಲ್ಯದ ಬಗ್ಗೆ ಅರಿವೇ ಇಲ್ಲ
4.5 ಬಿಲಿಯನ್ ಜನರಿಗೆ (ವಿಶ್ವದ 60%) ಸುರಕ್ಷಿತವಾಗಿ ನಿರ್ವಹಿಸಲಾದ ನೈರ್ಮಲ್ಯಬಗ್ಗೆ ತಿಳಿದಿಲ್ಲ.
ವಿಶ್ವದ 15% ಜನರು ಇನ್ನೂ ವಿಶ್ವದ 15% ಈಗಲೂ ಬಯಲು ಶೌಚ ಬಳಸುತ್ತಾರೆ .
ವಿಶ್ವದ 40% ಜನರಿಗೆ ಕೈ ತೊಳೆಯುವ ಸೌಲಭ್ಯ ಸಹ ಇಲ್ಲ
ಅಸುರಕ್ಷಿತ ನೈರ್ಮಲ್ಯವು ಬಾಲ್ಯದ ಬೆಳವಣಿಗೆ ಮೇಲೆ ಗಮನಾರ್ಹ ಪರಿಣಾಮ ಬೀರಿ ಬೆಳವಣಿಗೆ ಕುಂಠಿತಕ್ಕೆ ಕಾರಣವಾಗುತ್ತದೆ.
ಸ್ವಚ್ಛತೆ ಕುರಿತಾದ ಗಾಂಧಿವಾದಿ ಆಲೋಚನೆಗಳು:
ಗಾಂಧೀಜಿಯವರ ನೇತೃತ್ವದಲ್ಲಿ ಭಾರತೀಯರು ಸ್ವಾತಂತ್ರ್ಯ ಪಡೆದರು. ಆದರೆ ಅವರ ‘ಸ್ವಚ್ಛ ಭಾರತ’ದ ಕನಸು ಇನ್ನೂ ಈಡೇರಿಲ್ಲ. ಮಹಾತ್ಮ ಗಾಂಧಿ “ಸ್ವಾತಂತ್ರ್ಯಕ್ಕಿಂತ ನೈರ್ಮಲ್ಯ ಮುಖ್ಯ” ಎಂದು ಹೇಳಿದ್ದರು. ಸ್ವಚ್ಛತೆ ಮತ್ತು ನೈರ್ಮಲ್ಯ ಜೀವನದ ಅವಿಭಾಜ್ಯ ಅಂಗ ಎಂದೇ ಗಾಂಧೀಜಿ ನಂಬಿದ್ದರು. ದೈಹಿಕ ಯೋಗಕ್ಷೇಮ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಸ್ವಚ್ಛತೆ ಬಹುಮುಖ್ಯ ಎಂದು ಗಾಂಧೀಜಿ ಹೇಳುತ್ತಿದ್ದರು.
ಚಿಕ್ಕ ವಯಸ್ಸಿನಲ್ಲಿಯೇ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರೆ ಅದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದಿದ್ದರು ಗಾಂಧೀಜಿ. ಊಟಕ್ಕೆ ಮುಂಚಿತವಾಗಿ ಕೈ ತೊಳೆಯುವುದು, ನಿಯಮಿತವಾಗಿ ಹಲ್ಲುಜ್ಜುವುದು, ಮತ್ತು ಚಿಕ್ಕ ವಯಸ್ಸಿನಿಂದಲೇ ದಿನವೂ ಸ್ನಾನ ಮಾಡುವುದು ಮುಂತಾದ ಕೆಲವು ಅಭ್ಯಾಸಗಳನ್ನು ನಾವು ಬೆಳೆಸಿಕೊಂಡರೂ ಸಹ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡುವ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. “ಯಾರನ್ನೂ ಅವರ ಕೊಳಕು ಪಾದಗಳಿಂದ ನನ್ನ ಮನಸ್ಸಿನಲ್ಲಿ ನಡೆಯಲು ನಾನು ಬಿಡುವುದಿಲ್ಲ”ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು.ಎಲ್ಲೆಂದರಲ್ಲಿ ಯಾರೂ ಉಗುಳಬಾರದು. ಕೆಲವು ಸಂದರ್ಭಗಳಲ್ಲಿ ನಮ್ಮ ಕಫವು ಎಷ್ಟು ಹಾನಿಕಾರಕವಾಗಿದೆಯೆಂದರೆ ಅದರಲ್ಲಿನ ರೋಗಾಣುಗಳು ಇತರರಿಗೆ ಸೋಂಕು ತರುತ್ತವೆ. ಕೆಲವು ದೇಶಗಳಲ್ಲಿ ರಸ್ತೆಯಲ್ಲಿ ಉಗುಳುವುದು ಕ್ರಿಮಿನಲ್ ಅಪರಾಧ. ಎಲೆ ಅಡಿಕೆ ಮತ್ತು ತಂಬಾಕನ್ನುಅಗಿದು ಉಗುಳುವವರು ಇತರರ ಬಗ್ಗೆ ಯೋಚಿಸುವುದಿಲ್ಲ ಇದೇ ನಮ್ಮ ದೇಶದ ದೊಡ್ಡ ದುರಂತ.
ಸ್ವಚ್ಛತೆಗಾಗಿ ಸರ್ಕಾರ ಕೈಗೊಂಡ ಕ್ರಮಗಳು:
ಸ್ವಚ್ಛ್ ಭಾರತ್ ಮಿಷನ್ (ಎಸ್ಬಿಎಂ) ಅಥವಾ ಕ್ಲೀನ್ ಇಂಡಿಯಾ ಮಿಷನ್ ಎಂಬುದು ದೇಶಾದ್ಯಂತ ಆರಂಭಿಸಿದ ಅಭಿಯಾನವಾಗಿದ್ದು, 2014 ರಲ್ಲಿ ಭಾರತ ಸರ್ಕಾರವು ಬಯಲುಶೌಚಾಲಯ ತೊಡೆದುಹಾಕಲು ಮತ್ತು ಘನತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸಲು (ಎಸ್ಡಬ್ಲ್ಯುಎಂ) ಪ್ರಾರಂಭಿಸಿದೆ.
2014 ರ ಜೂನ್ನಲ್ಲಿ “ನಮಾಮಿ ಗಂಗೆ ಕಾರ್ಯಕ್ರಮ” ಪ್ರಾರಂಭಿಸಲಾಯಿತು
201 9ರಸ್ವಚ್ ಶಕ್ತಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ದೇಶಾದ್ಯಂತದ ಮಹಿಳಾ ಸರ್ಪಂಚರಿಗೆ ಸ್ವಚ್ ಶಕ್ತಿ ಪ್ರಶಸ್ತಿಗಳನ್ನು ನೀಡಿದರು.ಸ್ವಚ್ ಶಕ್ತಿ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಸ್ವಚ್ ಭಾರತ್ ಮಿಷನ್ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ನಿರ್ವಹಿಸುವ ಪಾತ್ರವನ್ನು ಕೇಂದ್ರೀಕರಿಸಲು ಉದ್ದೇಶಿಸಲಾಗಿದೆ.
ಆಗಸ್ಟ್ 8, 2020 ರಂದು ಭಾರತವನ್ನು ಕಸದಿಂದ ಮುಕ್ತಗೊಳಿಸಲು ಮೋದಿ, ವಾರ ಪೂರ್ತಿ ಅಭಿಯಾನ ಆರಂಭಿಸಿದ್ರು.’ಗಂಡಗಿ ಮುಕ್ತ ಭಾರತ್’ಕ್ಕೆ ಶನಿವಾರದಿಂದ ಚಾಲನೆ ದೊರೆಯಲಿದ್ದು, ಸ್ವಾತಂತ್ರ್ಯ ದಿನಾಚರಣೆಯವರೆಗೆ ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತು ನಡೆಯುತ್ತಿರುವ ಅಭಿಯಾನವನ್ನು ಪುನಃ ಜಾರಿಗೆ ತರಲಿದೆ.