ರಾಯಚೂರು:- ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ತಳಿಸಿರುವ ಅಮಾನವೀಯ ಘಟನೆಯೊಂದು ಜರುಗಿದೆ.
ಯಮುನಾಗೆ “ವಿಷ” ಹಾಕಿದ ಹೇಳಿಕೆ: ಅರವಿಂದ್ ಕೇಜ್ರಿವಾಲ್ ಗೆ ಕೋರ್ಟ್ ನಿಂದ ಸಮನ್ಸ್!
ವ್ಯಕ್ತಿಯೋರ್ವನ ಸಾವಿಗೆ ಈ ಮಹಿಳೆಯೇ ಕಾರಣ ಎಂದು ಆರೋಪಿಸಿ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ನಾಲ್ವರು ವ್ಯಕ್ತಿಗಳು ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ.
20 ದಿನದ ಹಿಂದೆ ಮೂರ್ಛೆ ರೋಗದಿಂದ ದುರುಗಪ್ಪ ಎಂಬಾತ ಮೃತಪಟ್ಟಿದ್ದನು. ಆತ ಪರಿಚಯವಿದ್ದ ಮಹಿಳೆಯ ಜೊತೆಗೆ ತೆರಳಿದ್ದಾಗ ವ್ಯಕ್ತಿ ಮೃತಪಟ್ಟಿರುವ ಶಂಕೆಯಿಂದ ಮಹಿಳೆಯನ್ನು ಸಾರ್ವಜನಿಕವಾಗಿ ಕಟ್ಟಿಹಾಕಿ ತಳಿಸಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಈ ಘಟನೆ ಜರುಗಿದೆ.
ವ್ಯಕ್ತಿಯೋರ್ವನ ಸಾವಿಗೆ ಪರಿಚಯಸ್ಥ ಮಹಿಳೆಯೇ ಕಾರಣ ಎಂದು ಆರೋಪಿಸಿ, ಜನವರಿ 27ರ ಸಂಜೆ ವೇಳೆಯಲ್ಲಿ ಬಸವರಾಜ ನಾಯಕ, ಯಂಕಮ್ಮ, ದುರ್ಗಮ್ಮ ಮತ್ತು ರೇಣುಕಾ ಎಂಬುವವರು ಮಹಿಳೆ ಮೇಲೆ ಅಮಾನುಷವಾಗಿ ವರ್ತನೆ ತೋರಿದ್ದಾರೆ.
ಬಸವರಾಜನ ಅಣ್ಣ ದುರುಗಪ್ಪನ ಸಾವಿಗೆ ಮಹಿಳೆಯೇ ಕಾರಣವೆಂದು ಆರೋಪಿಸಿ ಈ ಕೃತ್ಯ ಎಸಗಿದ್ದಾರೆ. ಅಂದಹಾಗೆ ಕಳೆದ 20 ದಿನಗಳ ಹಿಂದೆ ಮೂರ್ಛೆ ರೋಗದಿಂದ ದುರುಗಪ್ಪ ಮೃತಪಟ್ಟಿದ್ದು, ಆತನನಿಗೆ ಪರಿಚಯವಿದ್ದ ಮಹಿಳೆ ಜೊತೆ ತೆರಳಿದ್ದಾಗ ಮೃತಪಟ್ಟಿರುವ ಅನುಮಾನದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿ ನಿಂದನೆ ಮಾಡಿದ್ದಾರೆ.