ನವದೆಹಲಿ:- ಯಮುನಾ ನದಿಗೆ ಹರ್ಯಾಣ ಸರ್ಕಾರ ವಿಷ ಬೆರೆಸುತ್ತಿದೆ ಎಂಬ ಆರೋಪವನ್ನು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾಡಿದರು.
ಕುಂಭಮೇಳದಲ್ಲಿ ಕಾಲ್ತುಳಿತ ದುರಂತ: ಮೃತರ ಕುಟುಂಬಗಳಿಗೆ ಪರಿಷತ್ ಶಾಸಕ TA ಶರವಣ ಸಂತಾಪ!
ಇದೀಗ ಯಮುನಾ ನೀರು ವಿಷಪೂರಿತವಾಗಿದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಹರಿಯಾಣ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ದೆಹಲಿಗೆ ನೀರು ಸರಬರಾಜು ಮಾಡುವ ಬಗ್ಗೆ ಕೇಜ್ರಿವಾಲ್ ಅವರ ವಿವಾದಾತ್ಮಕ ಹೇಳಿಕೆಗಾಗಿ ಹರಿಯಾಣ ಸರ್ಕಾರ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದೆ. ಹರಿಯಾಣದ ಕಂದಾಯ ಸಚಿವ ವಿಪುಲ್ ಗೋಯಲ್ ಅವರು ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಗಳನ್ನು ಬೇಜವಾಬ್ದಾರಿತನದ ಹೇಳಿಕೆ ಎಂದು ಟೀಕಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಗಳು ದಾರಿತಪ್ಪಿಸುವಂತಿದೆ ಎಂದು ಹರಿಯಾಣ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಹೀಗಾಗಿ ನೀರಿನ ಬಗ್ಗೆ ಅರವಿಂದ್ ಕೇಜ್ರಿವಾಲ್ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕೋರ್ಟ್ ಈ ಆದೇಶ ನೀಡಿದೆ.
ಇನ್ನೂ ಯಮುನಾ ನದಿಗೆ ಹರ್ಯಾಣ ಸರ್ಕಾರ ವಿಷ ಬೆರೆಸುತ್ತಿದೆ ಎಂಬ ಅರವಿಂದ್ ಕೇಜ್ರಿವಾಲ್ ಆರೋಪಕ್ಕೆ ಹರ್ಯಾಣ ಸಿಎಂ ನಯಾಬ್ ಸಿಂಗ್ ಸೈನಿ ಸ್ನತಃ ತಾವೇ ನದಿಗಿಳಿದು ನೀರು ಕುಡಿಯುವ ಮೂಲಕ ತಿರುಗೇಟು ನೀಡಿದ್ದಾರೆ.
ಹರ್ಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಬುಧವಾರ ದೆಹಲಿಯ ಪಲ್ಲಾ ಗ್ರಾಮದ ಪಲ್ಲಾಘಾಟ್ ಗೆ ಆಗಮಿಸಿ ಸ್ವತಃ ತಾವೇ ನದಿಗಿಳಿದು ಯಮುನಾ ನದಿಯಿಂದ ನೀರು ತೆಗೆದುಕೊಂಡು ಸೇವಿಸಿದರು. ಈ ವೇಳೆ ಮಾತನಾಡಿದ ಅವರು, ‘ಹರಿಯಾಣದ ನೀರು ವಿಷಕಾರಿಯಲ್ಲ, ಆದರೆ ನಿಮ್ಮ ಮನಸ್ಸು ಖಂಡಿತವಾಗಿಯೂ ವಿಷದಿಂದ ತುಂಬಿದೆ” ಎಂದು ಕೇಜ್ರಿವಾಲ್ ಗೆ ಖಡಕ್ ತಿರುಗೇಟು ನೀಡಿದರು.