ಲುಯಯಪೂರಿ;-ಬಾರ್ ನಲ್ಲಿ ಮದ್ಯ ಸೇವಿಸಿದ್ದ ವ್ಯಕ್ತಿ ಆ್ಯಸಿಡ್ ಕುಡಿದು ಸಾವನ್ನಪ್ಪಿದ್ಜಾರೆ. ಘಟನೆ ಸಂಬಂಧ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲಾಗಿದೆ.
ಕುಂಭಮೇಳ ದುರಂತ: ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭಿಸಿದ ರಾಜ್ಯ ಸರ್ಕಾರ!
ಮಹಮ್ಮದ ಶಫೀಕ್ ಮನಿಯಾರ್ (40) ಮೃತ ವ್ಯಕ್ತಿ. ಮಹಮ್ಮದ ಸಾವಿಗೆ ಬಾರ್ ಮಾಲೀಕ, ಮ್ಯಾನೇಜರ್ ಹಾಗೂ ವೇಟರ್ ನಿರ್ಲಕ್ಷವೇ ಕಾರಣವೆಂದು ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
ಬಾರ್ ಮಾಲೀಕ ಹಾಗೂ ಬಿಜೆಪಿ ಮುಖಂಡ ವಿಜುಗೌಡ ಎಸ್ ಪಾಟೀಲ್, ಮ್ಯಾನೇಜರ್ ಅಪ್ಪಾಸಾಬ್ ಮಮದಾಪೂರ, ವೇಟರ್ ಆನಂದ ಶಿಂಧೆ ಮೇಲೆ ಬಿಎನ್ಎಸ್ ಕಾಯ್ದೆ 106 (1), 3 (5) ಕಲಂ ಪ್ರಕಾರ ದೂರು ದಾಖಲಿಸಲಾಗಿದೆ. ಬಾರ್ ಟೇಬಲ್ ಮೇಲೆ ನಿರ್ಲಕ್ಷ್ಯದಿಂದ ಆ್ಯಸಿಡ್ ಬಾಟಲ್ ಇಟ್ಟಿದ್ದೇ ಮೊಹಮ್ಮದ ಸಾವಿಗೆ ಕಾರಣವೆಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ