ಮಂಡ್ಯ:- ಫೈನಾನ್ಸ್ ಕಿರುಕುಳಕ್ಕೆ ಮಂಡ್ಯದಲ್ಲಿ ಮತ್ತೋರ್ವ ಮಹಿಳೆ ಸಾವನ್ನಪ್ಪಿದ ಘಟನೆ ಜರುಗಿದೆ. ಪ್ರೇಮಾ (59) ಮೃತ ಮಹಿಳೆ.
ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ: ಚಿರತೆ ದಾಳಿಗೆ ಮತ್ತೆರಡು ಟಗರು ಬಲಿ!
ಉಜ್ಜೀವನ್ ಬ್ಯಾಂಕ್ನಿಂದ ಪ್ರೇಮ 6 ಲಕ್ಷ ರೂ. ಸಾಲ ಪಡೆದಿದ್ದರು. ಈಗಾಗಲೇ 6 ಲಕ್ಷ ರೂ. ಹಣವನ್ನು ಕಟ್ಟಿದ್ದರು. ಇನ್ನೂ 6 ಲಕ್ಷ ರೂ. ಹಣ ಕಟ್ಟಬೇಕೆಂದು ಪೀಡಿಸುತ್ತಿದ್ದ ಉಜ್ಜೀವನ್ ಸಿಬ್ಬಂದಿ, ಪ್ರೇಮಾ ಮನೆ ಸೀಜ್ ಮಾಡಿದ್ದರು. ಇದರಿಂದ ಮನನೊಂದು ನಿನ್ನೆ ಕ್ರಿಮಿನಾಶಕ ಸೇವನೆ ಮಾಡಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದರು.
ಪ್ರೇಮಾರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.