ಪ್ರಸ್ತುತ ದಿನಗಳಲ್ಲಿ ಹಣ ಪ್ರತಿಯೊಬ್ಬರಿಗೂ ಬೇಕು. ಹಾಗೂ ಎಲ್ಲರೂ ತಮ್ಮ ಜೀವನದ ಅಗತ್ಯತೆಗ ಕೊಂಚ ಉಳಿತಾಯ ಕೂಡ ಮಾಡಿಕೊಂಡಿರಬೇಕು. ಭಾರತದಂತಹ ದೇಶದಲ್ಲಿ ಅತೀ ಹೆಚ್ಚು ಬಡ ಮತ್ತು ಮಧ್ಯಮ ವರ್ಗದ ಜನರೇ ಇರುವುದರಿಂದ ಇಲ್ಲಿ ಉಳಿತಾಯ ಖಾತೆ ಹೊಂದಿರುವುದು ಬಹಳ ಅನಿವಾರ್ಯವಾಗಿದೆ.
ಸುನೀತಾ ವಿಲಿಯಮ್ಸ್ ರನ್ನು ಕರೆತರುವ ಜವಾಬ್ದಾರಿಯನ್ನು ಎಲಾನ್ ಮಸ್ಕ್ ಗೆ ವಹಿಸಿದ ಟ್ರಂಪ್: ಬೈಡನ್ ಆಡಳಿತದ ಬಗ್ಗೆ ಆರೋಪ
ಪ್ರಸ್ತುತ ಪ್ರತಿಯೊಬ್ಬರೂ ಕನಿಷ್ಠ ಒಂದು ಉಳಿತಾಯ ಖಾತೆಯನ್ನು ಹೊಂದಿರಬೇಕು. ಇದು ನಿಮ್ಮ ಹಣಕಾಸು ನಿರ್ವಹಣೆಯಲ್ಲಿ ಹಲವು ಪ್ರಯೋಜನಗಳನ್ನು ನೀಡುತ್ತದೆ. ಠೇವಣಿ ಮತ್ತು ಹಿಂಪಡೆಯುವಿಕೆ ಕೂಡ ತುಂಬಾ ಸುಲಭ. ಆದ್ದರಿಂದಲೇ ಹೆಚ್ಚಿನ ಜನರು ತಮ್ಮ ದೈನಂದಿನ ಬ್ಯಾಂಕಿಂಗ್ ಸಂಬಂಧಿತ ಕೆಲಸವನ್ನು ಅದರ ಮೂಲಕ ಮಾಡುತ್ತಾರೆ.
ಸಾಮಾನ್ಯವಾಗಿ ನಾವು ಆರ್ಥಿಕ ವರ್ಷ ಎಂದು ಕರೆಯುವ ಏಪ್ರಲ್ 1ರಿಂದ ಮಾರ್ಚ್ 31ರವರೆಗೆ ಉಳಿತಾಯ ಖಾತೆಗಳಲ್ಲಿ ಒಬ್ಬ ವ್ಯಕ್ತಿ ಗರಿಷ್ಟ 10 ಲಕ್ಷ ರೂಪಾಯಿ ವ್ಯವಹಾರ ಮಾಡಬಹುದು. ಅದಕ್ಕಿಂತ ಹೆಚ್ಚಿನ ಹಣದ ವಹಿವಾಟು ನಡೆಸಿದರೆ ಆಗ ಅದು ಕೂಡ ತೆರಿಗೆ ವ್ಯಾಪ್ತಿಗೆ ಬರುತ್ತದೆ. ತೆರಿಗೆ ಕಟ್ಟಬೇಕಾಗುತ್ತದೆ. ಯಾವುದೇ ವ್ಯಕ್ತಿ 10 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣ ಜಮಾ ಮಾಡಿದರೆ ಆ ಬ್ಯಾಂಕ್ ಅದನ್ನು ಆದಾಯ ತೆರಿಗೆ ಇಲಾಖೆಗೆ ತಿಳಿಸಬೇಕಾಗುತ್ತದೆ. ಆಗ ಆದಾಯ ತೆರಿಗೆ ಇಲಾಖೆ ಹಣದ ಮೂಲ ಕೇಳಿ ನೋಟಿಸ್ ಕೊಡಬಹುದು. ಜೊತೆಗೆ ತೆರಿಗೆ ಕಟ್ಟುವಂತೆ ಸೂಚಿಸಬಹುದು.
ದಿನದ ಮಿತಿ ಕೂಡ ತಿಳಿಯಿರಿ:
ಒಂದು ದಿನಕ್ಕೆ ಉಳಿತಾಯ ಖಾತೆಗೆ ಕೇವಲ 50 ಸಾವಿರ ರೂಪಾಯಿಗಳನ್ನು ಜಮಾ ಮಾಡಬಹುದು. ಆ 50 ಸಾವಿರ ರೂಪಾಯಿ ಪಾವತಿಸುವುದಕ್ಕೂ ಪಾನ್ (PAN) ಕಾರ್ಡ್ ಕೊಡುವುದು ಕಡ್ಡಾಯವಾಗಿರುತ್ತದೆ. ಒಂದೊಮ್ಮೆ ಪಾನ್ ಕಾರ್ಡ್ ಹೊಂದಿಲ್ಲದಿದ್ದರೆ ಅಂಥವರು ಫಾರ್ಮ್ 60/61 ಅನ್ನು ಭರ್ತಿ ಮಾಡಿ ಕೊಡಬೇಕಾಗುತ್ತದೆ.
ಜಾಸ್ತಿ ಬಡ್ಡಿ ಬಂದರೂ ತೆರಿಗೆ ಕಟ್ಟಬೇಕಾಗುತ್ತದೆ:
ಇದಲ್ಲದೆ ಉಳಿತಾಯ ಖಾತೆಯಲ್ಲಿ ಒಂದು ವರ್ಷದ ವ್ಯವಹಾರಕ್ಕೆ 10 ಸಾವಿರ ರೂಪಾಯಿಗಿಂತ ಹೆಚ್ಚು ಬಡ್ಡಿ ಗಳಿಸಿದರೆ ಸ್ಥಿರ ಸ್ಲ್ಯಾಬ್ ಆಧಾರದ ಮೇಲೆ ಆ ಹಣಕ್ಕೆ ತೆರಿಗೆ ವಿಧಿಸಲಾಗುತ್ತದೆ. ಹಿರಿಯ ನಾಯಕರು ಮಾತ್ರ 50 ಸಾವಿರ ರೂಪಾಯಿವರೆಗಿನ ಬಡ್ಡಿಗೆ ತೆರಿಗೆ ವಿನಾಯಿತಿ ಪಡೆಯಬಹುದು.
ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದರೆ ಮೊದಲಿಗೆ ಅಗತ್ಯ ಪುರಾವೆಗಳನ್ನು ಒದಗಿಸಬೇಕಾಗುತ್ತದೆ. ಬ್ಯಾಂಕ್ ಸ್ಟೇಟ್ಮೆಂಟ್, ಹೂಡಿಕೆ ದಾಖಲೆಗಳು ಹಾಗು ಪಿತ್ರಾರ್ಜಿತ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗುತ್ತದೆ. ಇದರ ಬಗ್ಗೆ ಪ್ರಾಮಾಣಿಕೃತ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ ವ್ಯವಹರಿಸುವುದು ಉತ್ತಮ.