ಯಾದಗಿರಿ: ಸಾಲ ಮರುಪಾವತಿಗೆ ಒತ್ತಡ ಹಾಕದಂತೆ ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅದ್ರೆ ಸಿಎಂ ಸಿದ್ದರಾಮಯ್ಯ ಅವರ ಈ ಎಚ್ಚರಿಕೆಗೂ ಕೂಡ ಮೈಕ್ರೋ ಫೈನಾನ್ಸ್ ಕೇರ್ ಮಾಡದೇ ಮತ್ತದೇ ವರ್ತನೆ ತೋರುತ್ತಿದೆ. ಯಾದಗಿರಿ ತಾಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ. ಮೈಕ್ರೋ ಪೈನಾನ್ಸ್ ಕಿರುಕುಳಕ್ಕೆ ಕುಟುಂಬವೊಂದು ಊರು ಬಿಟ್ಟಿದೆ.
ಊರು ಬಿಟ್ಟ ಕುಟುಂಬದ ಮನೆಗೆ ಮೈಕ್ರೋ ಫೈನಾನ್ಸ್ ಬೀಗ ಜಡಿದಿದೆ. ಯಡ್ಡಳ್ಳಿ ಗ್ರಾಮದ ಗೀತಮ್ಮ ನಾಲ್ಕೈದು ಫೈನಾನ್ಸ್ನಲ್ಲಿ ಸಾಲ ಪಡೆದಿದ್ದಳು. ಫೈನಾನ್ಸ್ ಸಿಬ್ಬಂದಿಗಳ ನಿರಂತರ ಕಿರುಕುಳಕ್ಕೆ ಬೇಸತ್ತು ಬೆಂಗಳೂರಿಗೆ ದುಡಿಯಲು ಹೋಗಿದ್ದಳು. ಆದರೆ ಗೀತಮ್ಮನ ಮಗ ಮಲ್ಲಿಕಾರ್ಜುನ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಲಕ್ಷಾಂತರ ರೂ. ಖರ್ಚು ಮಾಡಿದ್ದಳು. ಆದರೆ ಚಿಕಿತ್ಸೆಯಿಂದ ಪ್ರಯೋಜನೆವಾಗದೇ ಮಗ ಬದುಕಲ್ಲ ಊರಿಗೆ ಕರೆದ್ಯೊಯಿರಿ ಎಂದು ವೈದ್ಯರು ಹೇಳಿದ್ದಾರೆ.
ಅದರಂತೆ ಅನಾರೋಗ್ಯಕ್ಕೆ ತುತ್ತಾದ ಮಗನೊಂದಿಗೆ ಗೀತಮ್ಮ ಊರಿಗೆ ಬಂದಿದ್ದಾರೆ. ಆದ್ರೆ ಅವರು ಊರಿಗೆ ಬರೋವಷ್ಟರಲ್ಲಿ ಮನೆಗೆ ಬೀಗ ಹಾಕಿದ್ದು, ಉಳಿದುಕೊಳ್ಳಲು ಜಾಗ ಇಲ್ಲದೇ ಮತ್ತೆ ಮಗನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಿದ್ದಾರೆ. ನಮಗೆ ಸಹಾಯ ಮಾಡಿ ಪುಣ್ಯ ಕಟ್ಕೊಳ್ಳಿ ಅಂತಾ ಗೀತಮ್ಮ ಕಣ್ಣೀರಾಕುತ್ತಿದ್ದಾರೆ.