ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಭಿನ್ನಮತ, ಬಣ ರಾಜಕೀಯ ತಾರಕಕ್ಕೇರಿರುವ ನಡುವಲ್ಲೇ ಚಿಕ್ಕಬಳ್ಳಾಪುರ ಸಂಸದ ಕೆ.ಕೆ ಸುಧಾಕರ್ ಅವರು ವಿಜಯೇಂದ್ರ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ.
ವಿಜಯೇಂದ್ರ ಅವರು ತಮ್ಮ ಧೋರಣೆ ಬದಲಾವಣೆ ಮಾಡಿಕೊಳ್ಳಲಿ ಅಥವಾ ಅವರನ್ನೇ ಹೈಕಮಾಂಡ್ ಬದಲಾವಣೆ ಮಾಡಲಿ ಎಂದು ಆಗ್ರಹಿಸಿದ್ದಾರೆ. ಬಿಜೆಪಿಯ ಎಲ್ಲಾ ಹಿರಿಯರನ್ನು ಮುಗಿಸುವ ಕೆಲಸ ಮಾಡ್ತಿದ್ದೀರಿ. ನಾನು ಈಗಾಗಲೇ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಯಾವುದೇ ಕಾರಣಕ್ಕೂ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಫೆ.1ರ ದಿನವೇ ಬಜೆಟ್ ಮಂಡನೆ ಮಾಡ್ತಾರೆ ಯಾಕೆ..? ಇದರ ಹಿಂದಿರೋ ರಹ್ಯಸವೇನು..? ಇಲ್ಲಿದೆ ಮಾಹಿತಿ
ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಅಗರ್ ವಾಲ್ ನನ್ನ ಜೊತೆ ಮಾತನಾಡಿದ್ದಾರೆ. ನಿಮಗೆ ಅನ್ಯಾಯ ಆಗೋಕೆ ಬಿಡಲ್ಲ ಅಂದಿದ್ದಾರೆ. ಕೋರ್ ಕಮಿಟಿಯಲ್ಲಿ ಚಿಕ್ಕಬಳ್ಳಾಪುರ ಸೇರಿ 13 ಜಿಲ್ಲೆಗಳ ಆಯ್ಕೆ ಪ್ರಸ್ತಾಪಿಸಿಲ್ಲ ಎಂದು ತಿಳಿಸಿದರು.
ನಾನು ಅಮಿತ್ ಶಾ ಅವರನ್ನು ಭೇಟಿಯಾಗ್ತೇನೆ. ಅವರ ಮುಂದೆ ನಿಮ್ಮ ಬಂಡವಾಳ ಬಿಚ್ಚಿಡ್ತೇನೆ. ನಿಮ್ಮದು ಹಠ ಮತ್ತೆ ದ್ವೇಷದ ರಾಜಕಾರಣ.ಇವರ ಧೋರಣೆಗೆ ನನ್ನ ಧಿಕ್ಕಾರ.ವಿಜಯೇಂದ್ರ ತಮ್ಮ ಧೋರಣೆ ಬದಲಾಯಿಸಿಕೊಳ್ಳಲಿ ಅಥವಾ ಅವರನ್ನೇ ಬದಲಾಯಿಸಿ ಎಂದು ವಿಜಯೇಂದ್ರ ಬದಲಾವಣೆಗೆ ಸುಧಾಕರ್ ಪಟ್ಟು ಹಿಡಿದಿದ್ದಾರೆ.
ನಮ್ಮ ಪಕ್ಷದಲ್ಲಿ ಅಂತರಿಕ ಪ್ರಜಾಪ್ರಭುತ್ವ ಇದೆ.ಅದನ್ನ ನಂಬಿ ನಾನು ಬಿಜೆಪಿಗೆ ಸೇರಿದ್ದೆ. ಪಕ್ಷದ ತತ್ವ ಸಿದ್ದಾಂತ ಒಪ್ಪಿ ಬಿಜೆಪಿಗೆ ಸೇರಿದ್ದೆ. ಚಿಕ್ಕಬಳ್ಳಾಪುರ ಬಿಜೆಪಿಗೆ ಮರುಭೂಮಿ ಇದ್ದಂತಿತ್ತು. ಯಡಿಯೂರಪ್ಪ ಸಿಎಂ ಮಾಡೋಕೆ ಪಕ್ಷ ಸೇರಿದ್ದೆ ಎಂದು ವಿವರಿಸಿದರು.