ಬೆಳಗಾವಿ: ಪ್ರಯಾಗ್ರಾಜ್ನ ಮಹಾಕುಂಭದ ಅಮೃತ ಸ್ನಾನದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಕರ್ನಾಟಕದ ಮೂಲದ ಮತ್ತಿಬ್ಬರು ಸಾವನ್ನಪ್ಪಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ. ನಗರದ ಶೆಟ್ಟಿ ಗಲ್ಲಿ ನಿವಾಸಿ ಅರುಣ್ ಕೋಪರ್ಡೆ ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿದೆ.
ಇಂದು ಬೆಳಗ್ಗೆ ತಂದೆ ಸಂಪರ್ಕಕ್ಕೆ ಸಿಗದ ಬಗ್ಗೆ ಮಗ ಓಂಕಾರ್ ಆತಂಕ ವ್ಯಕ್ತಪಡಿಸಿದ್ದರು. ಇದೀಗ ಅರುಣ್ ಅವರು ಸಾವನ್ನಪ್ಪಿರೋದು ಧೃಡವಾಗಿದೆ. ಇನ್ನೂ ಮೃತ್ಅರುಣ ಅವರ ಪತ್ನಿ ಕಾಂಚನಾ ಕೋಪರ್ಡೆಗೆ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಶಿವಾಜಿ ನಗರದ ನಿವಾಸಿ ಮಹಾದೇವಿ ಬಾವನೂರ ಸಾವನ್ನಪ್ಪಿದ್ದಾರೆ. ಮಹಾದೇವಿ ಕಳೆದ ಭಾನುವಾರದಂದು ಬಸ್ ನಲ್ಲಿ ಮೂವತ್ತು ಜನರ ಜೊತೆಗೆ ತೆರಳಿದ್ದರು. ಪುಣ್ಯ ಸ್ನಾನ ಮಾಡಲು ಹೋಗುವಾಗ ಕಾಲ್ತುಳಿತದಲ್ಲಿ ಸಿಕ್ಕು ಸಾವನ್ನಪ್ಪಿದ್ದಾರೆ. ಇನ್ನೂ ಬೆಳಗಾವಿಯ ಮೂಲದ ತಾಯಿ ಮಗಳು ಕೂಡ ಸಾವನ್ನಪ್ಪಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿದೆ.