ಬೆಂಗಳೂರು: ನಾವೆಲ್ಲರು ಸಿದ್ದರಾಮಯ್ಯ ಪರ ನಿಂತುಕೊಳ್ತೀವಿ. ಅದರಲ್ಲಿ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಕೇಸ್ನ್ನು ಸಿಬಿಐಗೆ ಕೊಡುವ ವಿಚಾರವಾಗಿ ಮೊದಲು ಹೈಕೋರ್ಟ್ನಲ್ಲಿ ಆದೇಶ ಬರಲಿ. ಆದೇಶ ಬಂದ ಮೇಲೆ ಗೊತ್ತಾಗುತ್ತದೆ. ಬರುವವರೆಗೂ ಕಾಯೋಣ,
ಬಂದ ಮೇಲೆ ಮುಂದಿನ ಚರ್ಚೆ ಮಾಡೋಣ. ಮುಡಾ ಕೇಸ್ ರಾಜಕೀಯ ಪ್ರೇರಿತ ಎಂದು ಮೊದಲ ದಿನದಿಂದ ಹೇಳುತ್ತಿದ್ದೇವೆ. ರಾಜಕೀಯ ದುರುದ್ದೇಶ ಇಟ್ಟುಕೊಂಡು ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ. ನಾವೆಲ್ಲರು ಸಿದ್ದರಾಮಯ್ಯ ಪರ ನಿಂತುಕೊಳ್ತೀವಿ. ಅದರಲ್ಲಿ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
CISF Recruitment 2025: ಕೈಗಾರಿಕಾ ಭದ್ರತಾ ಪಡೆಯಲ್ಲಿ ಉದ್ಯೋಗಾವಕಾಶ..! ವೇತನ 69 ಸಾವಿರ ರೂ
ಇದೇ ವೇಳೆ ತುಮಕೂರಿನಲ್ಲಿ 2ನೇ ಏರ್ಪೋರ್ಟ್ ವಿಚಾರವಾಗಿ ಮಾತನಾಡಿ, ಇದರಿಂದ 20 ರಿಂದ 22 ಜಿಲ್ಲೆಗಳಿಗೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ತುಮಕೂರು ಭಾಗದಲ್ಲಿ ಏರ್ಪೋರ್ಟ್ ಮಾಡಲು ಮನವಿ ಮಾಡಲಾಗಿದೆ. ನಮ್ಮ ಅಹವಾಲುಗಳನ್ನು ಹೇಳಿದ್ದೇವೆ. ತುಮಕೂರು ಭಾಗದಲ್ಲಿ ಆದರೆ ಉತ್ತರ ಕರ್ನಾಟಕದಿಂದ ಬರುವವರಿಗೆ ಅನುಕೂಲ ಆಗುತ್ತದೆ. ಈಗ ಇರುವ ಏರ್ಪೋರ್ಟ್ಗೂ ಸಂಪರ್ಕ ಉತ್ತಮವಾಗಿ ಇರಲಿದೆ. ಅವರು ತಾಂತ್ರಿಕವಾಗಿ ಏನು ಮಾಡುತ್ತಾರೆ ನೋಡಬೇಕು ಎಂದು ತಿಳಿಸಿದರು.