ಬೆಳಗಾವಿ : ಮಹಾಕುಂಭದ ಅಮೃತ ಸ್ನಾನದ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಬೆಳಗಾವಿಯ ತಾಯಿ-ಮಗಳು ಸಾವನ್ನಪ್ಪಿದ್ದಾರೆ. ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50) ಮೇಘಾ ಹತ್ತರವಾಠ್(25) ಮೃತಪಟ್ಟಿದ್ದಾರೆ.ಮೊದಲಿಗೆ ತಾಯಿ-ಮಗಳು ಇಬ್ಬರು ಸಹ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಇತ್ತು. ಕಾಲ್ತುಳಿತದ ಬಳಿಕ ಈ ವರೆಗೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಮೂವತ್ತು ಜನರು ಪ್ರಯಾಗ್ರಾಜ್ ಕುಂಬಮೇಳಕ್ಕೆ ತೆರಳಿದ್ದರು. ಬೆಳಗ್ಗೆಯಿಂದಲೂ ಸಂಪರ್ಕ ಮಾಡಲು ಕುಟುಂಬಸ್ಥರು ಪ್ರಯತ್ನಿಸಿದ್ದರು. ಆದರೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದೀಗ ಕಾಲ್ತುಳಿತದ ಬಳಿಕ ಬೆಳಗ್ಗೆ ಪ್ರಯಾಗ್ರಾಜ್ದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಬೆಳಗಾವಿಯ ತಾಯಿ ಮಗಳು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತದೆ. ಅವರ ಜೊತೆಗಿದ್ದ ಚಿದಂಬರ್ ಎಂಬುವವರಿಂದ ಮಾಹಿತಿ ಸಿಕ್ಕಿದೆ. ಮೇಘಾ ಅವರ ತಂದೆ ದೀಪಕ್ ಹತ್ತರವಾಠ ಹೇಳಿದ್ದಾರೆ.
ಮಹಾಕುಂಭದಲ್ಲಿ ಕಾಲ್ತುಳಿತ ಪ್ರಕರಣ ; ಭಕ್ತರು ಭಯ ಪಡದಂತೆ ಶಾಸಕ ಮಹೇಶ್ ಟೆಂಗಿನಕಾಯಿ ಮನವಿ
ಇನ್ನೂ ಬೆಳಗಾವಿಯಿಂದ ಸುಮಾರು ಜನರು ಪ್ರಯಾಗ್ ರಾಜ್ಗೆ ತೆರಳಿದ್ದು, ಅದರಲ್ಲಿ ಕೆಲವರು ಸಂಪರ್ಕದಲ್ಲಿದ್ದಾರೆ. ಕೆಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮತ್ತೆ ಕೆಲವರು ಸಂಪರ್ಕಕ್ಕೆ ಸಿಗುತ್ತಿಲ್ಲ