ಬೆಳಗಾವಿ : ಪ್ರಯಾಗ್ರಾಜ್ನ ಹಾಕುಂಭದ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಬೆಳಗಾವಿ ಮೂಲದ ದಂಪತಿಗಳು ಗಾಯಗೊಂಡಿದ್ದಾರೆ. ಬೆಳಗಾವಿ ನಗರದ ಶೆಟ್ಟಿಗಲ್ಲಿಯ ನಿವಾಸಿಗಳಾದ ಅರುಣ್ ಕೋಪರ್ಡೆ, ಕಾಂಚನಾ ಕೋಪರ್ಡೆಗೆ ಗಂಭೀರ ಗಾಯವಾಗಿದ್ದು, ಸದ್ಯ ಪ್ರಯಾಗ್ರಾಜ್ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಲ್ತುಳಿತ ಪ್ರಕರಣದಲ್ಲಿ ದಂಪತಿಗಳು ಬೇರೆ ಬೇರೆಯಾಗಿದ್ದು, ಅರುಣ್ ಒಂದು ಆಸ್ಪತ್ರೆಯಲ್ಲಿ, ಕಾಂಚನಾ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಭಾನುವಾರದಂದು ಇಬ್ಬರು ಸಹ ಬೆಳಗಾವಿಯಿಂದ ಹೊರಟ್ಟಿದ್ದರು. ನಿರಂತರವಾಗಿ ಪುತ್ರ ಓಂಕಾರ್ ಜೊತೆಗೆ ಪೋನ್ ಸಂಪರ್ಕದಲ್ಲಿದ್ದಾರೆ. ಪೋನ್ ಕರೆ ಮೂಲಕ ಪುತ್ರ ಓಂಕಾರ್ ಜೊತೆಗೆ ಮಾತನಾಡಿದ್ದು, ಏನೂ ಆಗಿಲ್ಲ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದಿದ್ದಾರೆ. ಈ ಬಗ್ಗೆ ಕಾಂಚನಾ ಬೇರೆ ಬೇರೆ ಆಸ್ಪತ್ರೆಯಲ್ಲಿ ಅಪ್ಪ, ಅಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಏನೂ ತೊಂದರೆ ಇಲ್ಲಾ ಅರಾಮಗಿದ್ದೇವೆ ಎಂದು ತಿಳಿಸಿದ್ದಾರೆ.