ರಾಯಚೂರು: ರಾಯಚೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ವ್ಯಕ್ತಿಯ ಸಾವಿಗೆ ಮಹಿಳೆ ಕಾರಣ ಎಂದು ಆರೋಪಿಸಿ ಆ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ತಳಿಸಲಾಗಿದೆ. ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ನಾಲ್ವರು ವ್ಯಕ್ತಿಗಳು ಅಮಾನವೀಯವಾಗಿ ಹಲ್ಲೆ ಮಾಡಿದ್ದು, ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.
20 ದಿನದ ಹಿಂದೆ ಮೂರ್ಛೆ ರೋಗದಿಂದ ದುರುಗಪ್ಪ ಎಂಬುವರು ಮೃತಪಟ್ಟಿದ್ದರು. ಆತ ಪರಿಚಯವಿದ್ದ ಮಹಿಳೆಯ ಜೊತೆಗೆ ತೆರಳಿದ್ದಾಗ ವ್ಯಕ್ತಿ ಮೃತಪಟ್ಟಿರುವ ಶಂಕೆಯಿಂದ ಮಹಿಳೆಯನ್ನು ಸಾರ್ವಜನಿಕವಾಗಿ ಕಟ್ಟಿಹಾಕಿ ತಳಿಸಿದ್ದಾರೆ. ಬಸವರಾಜ ನಾಯಕ, ಯಂಕಮ್ಮ, ದುರ್ಗಮ್ಮ ಮತ್ತು ರೇಣುಕಾ ಮೇಲೆ ಆರೋಪ ಕೇಳಿ ಬಂದಿದೆ. ಬಸವರಾಜನ ಅಣ್ಣ ದುರುಗಪ್ಪನ ಸಾವಿಗೆ ಮಹಿಳೆಯೇ ಕಾರಣವೆಂದು ಆರೋಪಿಸಿ ಈ ಕೃತ್ಯವೆಸಗಿದ್ದಾರೆ..