ಬೆಂಗಳೂರು:- ಮಹಿಳೆಯರ ಬ್ಯಾಕ್ ಟಚ್ ಮಾಡಿ ಎಸ್ಕೇಪ್ ಆಗ್ತಿದ್ದ ಆರೋಪಿಯನ್ನು ಬನಶಂಕರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಮುಷ್ಕರದ ಎಚ್ಚರಿಕೆ ನೀಡಿದ ಕೆಎಂಎಫ್ ನೌಕರರು!
ಅಸ್ಸಾಂನಿಂದ ಬಂದು ಬೆಂಗಳೂರಿನ ಖಾಸಗಿ ಕೆಲಸ ಮಾಡ್ತಿದ್ದ ಇಸ್ಲಾಂವುದ್ದೀನ್ (31) ಬಂಧಿತ ಆರೋಪಿ. ಈತ ಒಬ್ಬಂಟಿಯಾಗಿ ರಸ್ತೆಯಲ್ಲಿ ಓಡಾಡೋ ಮಹಿಳೆಯರನ್ನ ಟಾರ್ಗೆಟ್ ಮಾಡ್ತಿದ್ದ. ಬೈಕ್ ನಲ್ಲಿ ಹಿಂಬಂದಿಯಿಂದ ಮಹಿಳೆಯರನ್ನು ಫಾಲೋ ಮಾಡ್ತಿದ್ದ. ಮಹಿಳೆ ಜೊತೆಯಾಗಿ ಯಾರು ಇಲ್ಲ ಅನ್ನೊದು ಕನ್ಫರ್ಮ್ ಆಗ್ತಿದ್ದಂತೆ ಬ್ಯಾಕ್ ಟಚ್ ಮಾಡ್ತಿದ್ದ.
ಬ್ಯಾಕ್ ಟಚ್ ಮಾಡಿ ಬೈಕ್ ನಲ್ಲಿ ಎಸ್ಕೇಪ್ ಆಗ್ತಿದ್ದ. ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದೇ ರೀತಿಯ ಕೃತ್ಯ ಎಸಗಿದ್ದ. ಬನಶಂಕರಿ 2ನೇ ಹಂತದಲ್ಲಿ 36 ವರ್ಷದ ಮಹಿಳೆಯ ಹಿಂಭಾಗವನ್ನು ಮುಟ್ಟಿ ಎಸ್ಕೇಪ್ ಆಗಿದ್ದ. ಮಹಿಳೆ ನೀಡಿದ್ದ ದೂರಿನನ್ವಯ ಆರೋಪಿ ಇಸ್ಲಾಂವುದ್ದೀನ್ ಬಂಧಿಸಲಾಗಿದೆ.
ಜನವರಿ 23ರಂದು ಬೆಳಗ್ಗೆ ನಡೆದುಕೊಂಡು ಹೋಗ್ತಿದ್ದ ಮಹಿಳೆಗೆ ಕಿರುಕುಳ ನೀಡಿ ಎಸ್ಕೇಪ್ ಆಗಿದ್ದ. ಆರೋಪಿ ಬಂಧಿಸಿ ಜೈಲಿಗಟ್ಟಿರುವ ಬನಶಂಕರಿ ಪೊಲೀಸರು ಜೈಲಿಗಟ್ಟಿದ್ದಾರೆ.