ಕೊಪ್ಪಳ:-ಸ್ಟೀಲ್ ಪ್ಯಾಕ್ಟರಿಯಲ್ಲಿ ಕಾರ್ಬನ್ ಮೋನಾಕ್ಸೈಡ್ ಲೀಕ್ ಆಗಿ ಓರ್ವ ಕಾರ್ಮಿಕ ಸಾವನ್ನಪ್ಪಿದ ಘಟನೆ ಕೊಪ್ಪಳ ತಾಲೂಕಿನ ಅಲ್ಲಾನಗರ ಗ್ರಾಮದ ಬಳಿಯಿರುವ ಹೊಸಪೇಟ್ ಇಸ್ಫಾಥ್ ಸ್ಟೀಲ್ ಕಂಪನಿಯಲ್ಲಿ ಜರುಗಿದೆ. ಘಟನೆಯಲ್ಲಿ 9 ಜನರು ಅಸ್ವಸ್ಥಗೊಂಡಿದ್ದಾರೆ.
ಡೈರಿ ಸಿಬ್ಬಂದಿಯಿಂದಲೇ ನಂದಿನಿ ಹಾಲಿಗೆ ನೀರು ಕಲಬೆರಕೆ ಕೇಸ್: ವಿಸ್ತರಣಾಧಿಕಾರಿ, ಕಾರ್ಯದರ್ಶಿ, ಸಿಬ್ಬಂದಿ ಸಸ್ಪೆಂಡ್!
ಸ್ಟೀಲ್ ಉತ್ಫಾದನೆ ಬಂದ್ ಆಗಿದ್ದರೂ ಸಹ ಮಷಿನ್ ರಿಪೇರಿ, ಸರ್ವಿಸ್ ಸೇರಿದಂತೆ ಅನೇಕ ಕೆಲಸಗಳು ನಡೆದಿವೆ. ಈ ವೇಳೆ ಈ ದುರ್ಘಟನೆ ಸಂಭವಿಸಿದೆ. ಸರ್ವಿಸ್ ಸೇರಿದಂತೆ ಹಲವು ಕೆಲಸ ನಿಮಿತ್ತ ನೂರಾ ಐವತ್ತಕ್ಕೂ ಹೆಚ್ಚು ಕಾರ್ಮಿಕರು ಪ್ಯಾಕ್ಟರಿಗೆ ಬರುತ್ತಿದ್ದರು. ಆದ್ರೆ ಇಂದು ಮಧ್ನಾಹ್ನ ಮೂರು ಗಂಟೆ ಸಮಯದಲ್ಲಿ ಪ್ಯಾಕ್ಟರಿಯಲ್ಲಿ ಕಾರ್ಬನ್ ಮೋನಾಕ್ಸೈಡ್ ಟ್ಯಾಂಕ್ ಲೀಕ್ ಆಗಿದೆ. ಈ ಸಮಯದಲ್ಲಿ ಸ್ಥಳದಲ್ಲಿದ್ದ ಇಪ್ಪತ್ನಾಲ್ಕು ವರ್ಷದ ಕಾರ್ಮಿಕ ಅಪಾಯಕಾರಿಯಾಗಿರೋ ಕಾರ್ಬನ್ ಮೋನಾಕ್ಸೈಡ್ ಸೇವಿಸಿ ಮೃತಪಟ್ಟಿದ್ದಾನೆ.
ಮಾರುತಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವುದನ್ನು ಗಮನಿಸಿದ ಕೆಲ ಕಾರ್ಮಿಕರು ಆತನ ರಕ್ಷಣೆಗೆ ಹೋಗಿದ್ದಾರೆ. ಆದ್ರೆ ಉಸಿರಾಟದ ಮೂಲಕ ಕಾರ್ಬನ್ ಮೋನಾಕ್ಸೈಡ್ ದೇಹದೊಳಗೆ ಹೋಗಿದ್ದರಿಂದ ಅವರು ಕೂಡಾ ಅಸ್ವಸ್ಥರಾಗಿದ್ದಾರೆ. ಕೂಡಲೇ ಅಸ್ವಸ್ಥರನ್ನು ಕೊಪ್ಪಳ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.