ಬೆಂಗಳೂರು : ಮುಡಾ ಕೇಸ್ ಬಗೆದಷ್ಟು ಬಯಲಾಗುತ್ತಿದೆ. ಇಡಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಗೆ ನೋಟಿಸ್ ನೀಡಲಾಗಿದೆ.
ಈ ಬಗ್ಗೆ ಎಂಎಲ್ಸಿ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಲ್ಲಿ ಮಾತಾಡಿದ ಅವರು, ಬಹುತೇಕ ಎಲ್ಲಾ ಪಕ್ಷಗಳು ಮುಡಾ ತನಿಖೆ ಬಗ್ಗೆ ಒಪ್ಪಿಕೊಂಡಿವೆ. ಸಮಗ್ರ ತನಿಖೆ ಬಗ್ಗೆ ಆಗ್ರಹಿಸಿವೆ. ಸಿಎಂ ಪತ್ನಿ ಆಗದಿದ್ದರೆ 30ವರ್ಷಗಳ ಹಿಂದೆ ನಿರ್ಮಾಣವಾದ ವಿಜಯನಗರದಲ್ಲಿ ಬದಲಿ ನಿವೇಶನ ಸಿಗುತ್ತಿರಲಿಲ್ವಾ? ಎಂದು ಹೇಳಿದರು.
ಹಿಂದೆ ವಶಪಡಿಸಿಕೊಂಡ ನಿವೇಶನಕ್ಕೆ 50:50ಅನುಪಾತದಲ್ಲಿ ನಿವೇಶನ ಮಂಜೂರು ಮಾಡುವಂತಿಲ್ಲ. ಆದ್ರೆ ಸಿಎಂ ಪತ್ನಿಗೆ ಬದಲಿ ನಿವೇಶನ ಕೊಟ್ಟಿರೋದು ತಪ್ಪಲ್ಲವೇ ಎಂದು ಪ್ರಶ್ನಿಸಿದರು.
ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಹಾಗೆಯೇ ಮುಡಾ ಹಗರಣಕ್ಕೂ ಕನ್ನಡಿ ಬೇಕಿಲ್ಲ. ಇಡಿ 142 ಸೈಟ್ ಮುಟ್ಟುಗೋಲು ಹಾಕಿಕೊಂಡಿದೆ. ಆದ್ರೆ ಲೋಕಾಯುಕ್ತ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅಧಿಕಾರಿಗಳು ಏನು ಮಾಡುತಿದ್ದರು ಎಂದು ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.