ಎಬಿ ಡಿವಿಲಿಯರ್ಸ್ ಫ್ಯಾನ್ ಗೆ ಗುಡ್ ನ್ಯೂಸ್ ಸಿಕ್ಕಿದ್ದು, ನಾಲ್ಕು ವರ್ಷಗಳ ನಂತರ ಕ್ರೀಡೆಗೆ ಮರಳುವುದಾಗಿ ಘೋಷಿಸಿದ್ದಾರೆ.
ಸಾರ್ವಕಾಲಿಕ ಮತ್ತು ಉತ್ಸಾಹಭರಿತ ಕ್ರಿಕೆಟಿಗರಲ್ಲಿ ಒಬ್ಬರೆಂದು ಕರೆಯಲ್ಪಡುವ ಡಿವಿಲಿಯರ್ಸ್, ವಿಶ್ವ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ನ 2ನೇ ಆವೃತ್ತಿಯಲ್ಲಿ ಗೇಮ್ ಚೇಂಜರ್ಸ್ ಸೌತ್ ಆಫ್ರಿಕಾ ಚಾಂಪಿಯನ್ಸ್ ಅನ್ನು ಮುನ್ನಡೆಸಲಿದ್ದಾರೆ.
ನಿವೃತ್ತ ಮತ್ತು ಗುತ್ತಿಗೆ ಪಡೆಯದ ಕ್ರಿಕೆಟ್ ದಂತಕಥೆಗಳನ್ನು ಒಳಗೊಂಡ ಈ ಪ್ರಮುಖ ಟಿ20 ಪಂದ್ಯಾವಳಿಯು ಪ್ರಪಂಚದಾದ್ಯಂತದ ಅಭಿಮಾನಿಗಳಿಗೆ ಕಿಕ್ ನೀಡಲಿದೆ.
ತಮ್ಮ ತಂಡಕ್ಕೆ ಮರಳುವ ಬಗ್ಗೆ ಡಿವಿಲಿಯರ್ಸ್ ಮಾತನಾಡಿದ್ದಾರೆ. ‘ನಾಲ್ಕು ವರ್ಷಗಳ ಹಿಂದೆ ನಾನು ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದೇನೆ. ಏಕೆಂದರೆ ಇನ್ಮುಂದೆ ಆಡಬೇಕೆಂಬ ಹಂಬಲ ನನಗಿರಲಿಲ್ಲ. ಸಮಯ ಕಳೆದಿದೆ. ನನ್ನ ಚಿಕ್ಕ ಮಕ್ಕಳು ಆಟವನ್ನು ಆಡಲು ಪ್ರಾರಂಭಿಸಿದ್ದಾರೆ. ನಾವು ಉದ್ಯಾನದಲ್ಲಿ ಆಡುತ್ತಿದ್ದೇವೆ. ಒಂದು ರೀತಿಯ ಜ್ವಾಲೆ ಮತ್ತೆ ಬೆಳಗಿದಂತೆ ಭಾಸವಾಗುತ್ತಿದೆ’ ಎಂದು WCL ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.