ಬೆಂಗಳೂರು:- ಮಾಂಸಪ್ರಿಯರು ನೋಡಲೇಬೇಕಾದ ಸ್ಟೋರಿ ಇದು. ಬೆಂಗಳೂರಿನಲ್ಲಿ ಜನವರಿ 30ರ ದಿನ ನಾನ್ ವೆಜ್ ಎನ್ನಲಾಗಿದೆ. ಮಹಾತ್ಮ ಗಾಂಧೀಜಿ ಹುತಾತ್ಮ ದಿನದ ಪ್ರಯುಕ್ತ ಜ.30ರಂದು ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಲಯಗಳಲ್ಲೂ ಮಾಂಸ ಮಾರಾಟ ನಿಷೇಧಿಸಲಾಗಿದೆ.
ತಣ್ಣೀರು ಕುಡಿಯೋದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಏಕೆ ಒಳ್ಳೆಯದಲ್ಲ ಗೊತ್ತಾ!? ಹಾಗಿದ್ರೆ ಇದನ್ನು ತಿಳಿಯಿರಿ!
ಬೆಂಗಳೂರಿನ ಎಲ್ಲಾ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಹಾಗೂ ಅಂಗಡಿಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಬಿಬಿಎಂಪಿಯ ಪಶುಪಾಲನಾ ವಿಭಾಗದಿಂದ ಮಂಗಳವಾರ ಆದೇಶ ಹೊರಡಿಸಲಾಗಿದೆ.
ಸದ್ಯ ಬಿಬಿಎಂಪಿ ಆದೇಶದಿಂದ ಮಾಂಸಪ್ರಿಯರಿಗೆ ಶಾಕ್ ಆಗಿದೆ. ಆದರೆ ಪ್ರತಿ ಬಾರಿಯಂತೆ ಈ ಬಾರಿಯೂ ಸರ್ವೋದಯ ದಿನದಂದು ಪ್ರಾಣಿವಧೆ ಹಾಗೂ ಅಂಗಡಿಗಳಲ್ಲಿ ಮಾಂಸ ಮಾರಾಟಕ್ಕೆ ಬಿಬಿಎಂಪಿ ನಿಷೇಧಿಸುತ್ತಾ ಬರುತ್ತಿರುತ್ತಿದೆ. ಹಾಗಾಗಿ ಎಲ್ಲರೂ ಬಿಬಿಎಂಪಿ ಆದೇಶವನ್ನು ಪಾಲಿಸಲೇಬೇಕಿದೆ. ಒಂದು ವೇಳೆ ಆದೇಶವನ್ನು ಮೀರಿ ಮಾಂಸ ಮಾರಾಟ ಮಾಡಿದರೆ ಬಿಬಿಎಂಪಿ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ.
ಜನವರಿ 30 ಗಾಂಧೀಜಿ ಅವರ ಪುಣ್ಯ ಸ್ಮರಣೆಯ ದಿನವನ್ನು ಹುತಾತ್ಮರ ದಿನವಾಗಿಯೂ ಆಚರಿಸಲಾಗುತ್ತದೆ. ಈ ದಿನದಂದು ದೇಶಕ್ಕಾಗಿ ತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸಲಾಗುತ್ತದೆ. ಗಾಂಧಿ ಅವರು ಅಹಿಂಸೆಯ ಪ್ರತಿರೂಪ ಆಗಿರುವುದರಿಂದ ಅವರ ಪುಣ್ಯ ಸ್ಮರಣೆಯಂದು ಪ್ರಾಣಿವಧೆ ಮತ್ತು ಮಾಂಸ ಮಾರಾಟಕ್ಕೆ ಕಡಿವಾಣ ಹಾಕಲಾಗುತ್ತಿದೆ.