ಹುಬ್ಬಳ್ಳಿ: ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ವಾಗ್ದಾಳಿ ಮುಂದುವರೆಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಗಂಗಾ ಸ್ನಾನ ಮಾಡಿದ ತಕ್ಷಣ ಮೋದಿ ಅಮಿತ್ ಶಾ ಪಾಪ ಹೋಗಲ್ಲ ಎಂದು ವ್ಯಂಗ್ಯವಾಡಿದ್ದಾರೆ. . ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕತೆ ಹಾಳಾಗಿದೆ. ಎರಡು ಲಕ್ಷ ಕಿರಾಣಿ ಅಂಗಡಿಗಳು ಮುಚ್ಚಿ ಹೋಗಿವೆ. ಇದನ್ನು ಯಾರಾದರೂ ಮಾತಾಡ್ತಾರಾ? ಬಿಜೆಪಿಯವರಂತೂ ಇದರ ಬಗ್ಗೆ ದನಿ ಎತ್ತುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಲೋಕಪಾಲ್ ಗೆ ಗೌರವ ಕೊಟ್ಟಂತೆ, ನಾವು ಲೋಕಾಯುಕ್ತ ಸಂಸ್ಥೆ ನಂಬುತ್ತೇವೆ. ಹೊಸತನದ ರಾಜಕೀಯ ಬರಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದರು. ವಾಟ್ಸಪ್ ಯುನಿವರ್ಸಿಸಿ ಫೈನಲ್ ಅಲ್ಲ. ಯುವ ಜನತೆ ಅರ್ಥ ಮಾಡಿಕೊಳ್ಳಬೇಕು. ದೇಶ ಬಿಜೆಪಿ ಕಾಂಗ್ರೆಸ್ ನವರ ಸ್ವತ್ತಲ್ಲ ಎಂದರು.
ಕೇಂದ್ರ ಬಜೆಟ್ ಬಗ್ಗೆ ಏನೂ ನಿರೀಕ್ಷೆ ಇಲ್ಲ. ಎಲ್ಲ ಡಬ್ಬಾ ಎಂದ ಅವರು, ಬರೋದು ಹಿಂದುಗಳ ಬಗ್ಗೆ ಮಾತಾಡೋದು. ಹಿಂದು – ಮುಸ್ಲಿಂ ಸೆಂಟಿಮೆಂಟ್ ಬಿಟ್ರೆ ಏನಿಲ್ಲ ಇವರ ಬಳಿ ಮಾತನಾಡಲು. ಯಾವ ಹಿಂದುಗಳಿಗೆ ಏನಾಗಿದೆ,ಅದರ ಡಿಟೇಲ್ಸ್ ಕೊಡ್ತಾರಾ? ಡಿಜಿಪಿ ಗ್ರೋಥ್ ಬಗ್ಗೆ ಸ್ಪಷ್ಟೀಕರಣ ಕೊಡ್ತಾರಾ? ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾರಲ್ಲ, ಹಾಗಾಗಿದೆ ಬಿಜೆಪಿ ಸ್ಥಿತಿ. ಮೇಕ್ ಇನ್ ಇಂಡಿಯಾದಲ್ಲಿ ಏನಾಗಿದೆ? ಏನೋ ಒಂದು ಹೇಳೋದು ಹೋಗೋದು ಎಂದರು.