ಭಾರತದ ಬ್ಯಾಟಿಂಗ್ ತಂಡದಲ್ಲಿ ಪ್ರಮುಖ ವ್ಯಕ್ತಿಯಾಗಿರುವ ರಾಹುಲ್, ಹರಿಯಾಣ ವಿರುದ್ಧದ ನಿರ್ಣಾಯಕ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ಜೆರ್ಸಿಯನ್ನು ಧರಿಸಲು ಸಜ್ಜಾಗಿದ್ದಾರೆ, ಇದು 2020 ರ ನಂತರ ಸ್ಪರ್ಧೆಯಲ್ಲಿ ಅವರ ಮೊದಲ ಪ್ರದರ್ಶನವಾಗಿದೆ. ಹೌದು ಜನವರಿ 30 ರಿಂದ ದೆಹಲಿ ಮತ್ತು ರೈಲ್ವೇಸ್ ತಂಡಗಳ ನಡುವೆ ನಡೆಯಲಿರುವ ಪಂದ್ಯದಲ್ಲಿ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಕೊಹ್ಲಿ ಮಾತ್ರವಲ್ಲದೆ ಕೆಎಲ್ ರಾಹುಲ್ ಕೂಡ 5 ವರ್ಷಗಳ ನಂತರ ಕರ್ನಾಟಕ ತಂಡದ ಪರ ರಣಜಿ ಆಡಲಿದ್ದಾರೆ.
ರಣಜಿ ಟ್ರೋಫಿಯ ಗುಂಪು ಹಂತದ ಅಂತಿಮ ಸುತ್ತು ಜನವರಿ 30 ರಿಂದ ಜನವರಿ 2 ರವರೆಗೆ ನಡೆಯಲಿದೆ. ಕೆಎಲ್ ರಾಹುಲ್ ಕೂಡ ಈ ಸುತ್ತಿನಲ್ಲಿ ಕರ್ನಾಟಕ ಪರ ಕಣಕ್ಕಿಳಿಯಲಿದ್ದಾರೆ. ಕರ್ನಾಟಕ ತಂಡ ಬೆಂಗಳೂರಿನಲ್ಲಿ ಹರಿಯಾಣವನ್ನು ಎದುರಿಸಬೇಕಿದೆ. ಮೊಣಕೈ ಗಾಯದಿಂದಾಗಿ ಕೆಎಲ್ ರಾಹುಲ್ ಪಂಜಾಬ್ ವಿರುದ್ಧದ ಕೊನೆಯ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಆದರೆ ಅವರು ಈಗ ಫಿಟ್ ಆಗಿದ್ದು, ಮಂಗಳವಾರ ಮತ್ತು ಬುಧವಾರ ತಂಡದೊಂದಿಗೆ ಅಭ್ಯಾಸ ಮಾಡಲಿದ್ದಾರೆ.
ಫೆಬ್ರವರಿ 2020 ರಲ್ಲಿ ಕೋಲ್ಕತ್ತಾದಲ್ಲಿ ನಡೆದಿದ್ದ ಬಂಗಾಳ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕೆಎಲ್ ರಾಹುಲ್ ಕೊನೆಯದಾಗಿ ಕರ್ನಾಟಕ ಪರ ಆಡಿದ್ದರು. ಇದಾದ ಬಳಿಕ ಈ ಟೂರ್ನಿಯಿಂದ ದೂರ ಉಳಿದಿದ್ದಾರೆ. ಇದೀಗ ಕೆಎಲ್ ರಾಹುಲ್ ವಾಪಸಾತಿ ಕರ್ನಾಟಕ ತಂಡಕ್ಕೆ ಒಳ್ಳೆಯ ಸುದ್ದಿಯಾಗಿದೆ, ಏಕೆಂದರೆ ಈ ಪಂದ್ಯವು ಕರ್ನಾಟಕ ತಂಡಕ್ಕೆ ಬಹಳ ಮುಖ್ಯವಾಗಿದೆ. ‘ಸಿ’ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಟೂರ್ನಿಯಲ್ಲಿ ಭರವಸೆ ಜೀವಂತವಾಗಿರಿಸಲು ಹರಿಯಾಣ ವಿರುದ್ಧ ನೇರ ಗೆಲುವಿನ ಅಗತ್ಯವಿದೆ.